ಇಸ್ಲಾಮಾಬಾದ್ : ಕೆಲವೊಂದು ಭಾರಿ ಕೆಲ ಘಟನೆಗಳು ನಿಜಕ್ಕೂ ಶಾಕ್ ಕೊಡುತ್ತವೆ.
ಸದ್ಯ ಹಲವೇಡೆ ಟಿಕ್ ಟಾಕ್ ಬ್ಯಾನ್ ಆಗಿರೋದು ಎಲ್ಲರಿಗೂ ತಿಳಿದಿರುವ ಸತ್ಯ ಅದಕ್ಕೆ ಪಾಕ್ ಕೂಡ ಹೊರತ್ತಲ್ಲ.
ಆದ್ರೆ ವಿಚಿತ್ರ ನೋಡಿ ಪಾಕಿಸ್ತಾನದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಟಿಕ್ ಟಾಕ್ ಸ್ಟಾರ್ ಜನ್ನತ್ ಮಿರ್ಜಾ ದೇಶವನ್ನೆ ತೊರೆಯುವ ನಿರ್ಧಾರ ಮಾಡಿದ್ದಳು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಟಿಕ್ ಟಾಕ್ ಮೂಲಕ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಜನ್ನತ್ ಮಿರ್ಜಾ, ತನ್ನ ಕ್ಯೂಟ್ ವಿಡಿಯೋಗಳ ಮೂಲಕ ಒಂದು ಕೋಟಿಗೂ ಅಧಿಕ ಅಭಿಮಾನಿಗಳು ಮತ್ತು ಫೋಲೋವರ್ಸ್ ಹೊಂದಿದ್ದಳು.
ಈ ಮೂಲಕ ಪಾಕಿಸ್ತಾನದಲ್ಲಿ ನಂಬರ್ ಓನ್ ಟಿಕ್ ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಳು.
ಆದರೆ ಇತ್ತೀಚೆಗೆ ದೇಶದಲ್ಲಿ ಟಿಕ್ ಟಾಕ್ ಮೂಲಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅದನ್ನು ಬ್ಯಾನ್ ಮಾಡಲಾಗಿತ್ತು.
ಇತ್ತ ಜನ್ನತ್ ಮಿರ್ಜಾ ಮಾಡೆಲ್ ಆಗಿದ್ದು, ಟಿಕ್ ಟಾಕ್ ಮೂಲಕವೇ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದರು.
ಈಗ ಟಿಕ್ ಟಾಕ್ ಬ್ಯಾನ್ ಆದರೆ ನನ್ನ ಅದಾಯಕ್ಕೆ ಪೆಟ್ಟು ಬೀಳಲಿದೆ.
ಹೀಗಾಗಿ ನಾನು ದೇಶ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಯೊಬ್ಬರ ಬಳಿ ಹೇಳಿಕೊಂಡಿದ್ದಳು.
ಅಭಿಮಾನಿಯೊಬ್ಬ ಜನ್ನತ್ ಮಿರ್ಜಾ ಅವರಿಗೆ ಟಿಕ್ ಟಾಕ್ ಬ್ಯಾನ್ ಆಗುತ್ತಿದೆ ಈಗ ಏನೂ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದ.
ಇದಕ್ಕೆ ಉತ್ತರಿಸಿದ್ದ ಜನ್ನತ್ ಪಾಕಿಸ್ತಾನ ಒಂದು ಸುಂದರ ರಾಷ್ಟ್ರ ಆದರೆ ಪಾಕಿಸ್ತಾನದಲ್ಲಿರುವ ಜನರ ಮನಸ್ಥಿತಿ ಸರಿಯಿಲ್ಲ. ನಾನು ದೇಶ ಬಿಡುತ್ತೇನೆ ಎಂದು ಹೇಳಿದ್ದರು.
ಈಗ ದೇಶ ಬಿಡಲು ಸಿದ್ಧವಾಗಿದ್ದ ಮಾಡೆಲ್ ಜನ್ನತ್ ಮಿರ್ಜಾ ಅವರಿಗೆ ಪಾಕ್ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಈಗ ಟಿಕ್ ಟಾಕ್ ಪಾಕಿಸ್ತಾನದಲ್ಲಿ ಲಭ್ಯವಿದೆ ಈಗ ದೇಶವನ್ನು ಬಿಡುವ ಯೋಜನೆ ಇದಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜನ್ನತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
PublicNext
20/10/2020 12:41 pm