ಚಾಮರಾಜನಗರ: KSRTC ಬಸ್ ನಿರ್ವಾಹಕನ ಗಾಯನಕ್ಕೆ ಪ್ರಯಾಣಿಕರು ಮನಸೋತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಮರಾಜನಗರದಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟ ಹೋಗೆನೆಕಲ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ನಿರ್ವಾಹಕ ಹೇಮಂತ್ ಅವರು ಹಾಡು ಹಾಡಿ ಪ್ರಯಾಣಿಕರು ರಂಜಿಸಿದ್ದಾರೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮೆಚ್ಚಿನ ಹಾಡು 'ನಿನ್ನ ಕಂಗಳ ಬಿಸಿಯ ಹನಿಗಳು' ಹಾಡನ್ನು ಹಾಡಿರುವ ಹೇಮಂತ್ ಅವರ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
20/09/2022 06:57 pm