ಮುಂಬಯಿ : ಡೇಟಿಂಗ್ ಆಪ್ ಗಳಲ್ಲಿ ಜೋಡಿ ಸಿಗದ ಕಾರಣಕ್ಕೆ ಬೇಸತ್ತ ಅಲನ್ ಕ್ಲೇಟನ್ (30) ಎಂಬ ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ತನ್ನನ್ನೇ ತಾನು ಮಾರಾಟಕ್ಕೆ ಇಟ್ಟಿರುವ ವಿಚಿತ್ರ ಘಟನೆ ನಡೆದಿದೆ.
ಈ ವ್ಯಕ್ತಿ ಒಂದು ದಶಕಗಳಿಂದ ಏಕಾಂಗಿಯಾಗಿರುವ ಅಲನ್ ಕ್ಲೇಟನ್ (30) ಡೇಟಿಂಗ್ ಗರ್ಲ್ ಫ್ರೆಂಡ್ ಸಿಗದೇ ಬೇಸತ್ತು, ಫೇಸ್ ಬುಕ್ ನಲ್ಲಿ ತನ್ನನ್ನೇ ಮಾರಾಟಕ್ಕೆ ಇಟ್ಟಿದ್ದಾನೆ, ಅಲ್ಲದೇ, ಫೇಸ್ ಬುಕ್ ನಲ್ಲಿ ತನ್ನನ್ನು ಅತ್ಯಂತ ಒಳ್ಳೆಯ ಸ್ಥಿತಿಯಲ್ಲಿರುವ ವ್ಯಕ್ತಿಯಾಗಿದ್ದು, ಉಚಿತವಾಗಿ ಲಭ್ಯವಾಗುವುದಾಗಿ ಹೇಳಿಕೊಂಡಿದ್ದಾನೆ. ಅಚ್ಚರಿಯೆಂಬಂತೆ ಈ ವ್ಯಕ್ತಿಯ ಪ್ರಸ್ತಾವನೆಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು ಇನ್ ಬಾಕ್ಸ್ ನಲ್ಲಿ ಮೆಸೇಜ್‌ಗಳ ಸುರಿಮಳೆಯೇ ಹರಿದುಬಂದಿದ್ದು, ಕೆಲವರು ಆತನಿಗೆ ಗುಡ್ ಲಕ್ ತಿಳಿಸಿದ್ದಾರೆ.
ಈ ವ್ಯಕ್ತಿ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಈತನ ಪ್ರೊಫೈಲ್ ಫೋಟೋ ವೈರಲ್ ಆಗುತ್ತಿವೆ. ಇಲ್ಲಿಯವರೆಗೂ ನಾನು ಒಂದು ಬಾರಿ ಮಾತ್ರ ಡೇಟಿಂಗ್ ಗೆ ಹೋಗಿದ್ದೇನೆ. ಅದು ಸರಿ ಹೋಗಲಿಲ್ಲ ಎಂದು ಆತ ಹೇಳಿದ್ದಾನೆ.
PublicNext
03/10/2020 09:56 am