ಕುಳಿತು ಉಂಡರೇ ಕುಡಿಕೆ ಹೊನ್ನು ಸಾಲದು ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ದುಡಿದು ತಿಂದರೆ ಯಾರುದ್ದು ಏನು ಎನ್ನುವುದು ಅಷ್ಟೇ ಸತ್ಯ. ಸದ್ಯ ನಾವು ಇಲ್ಲೊಬ್ಬ 70 ರ ಹರೆಯದ ಹುಡುಗಿಯನ್ನಾ ನಿಮಗೆ ಪರಿಚಯ ಮಾಡಿಸುತ್ತೇವೆ ನೋಡಿ ಇವರ ಜೀವನ ಶೈಲಿ ನಿಜಕ್ಕೂ ಮಾದರಿ.
ಸ್ವಾವಲಂಭಿ ಜೀವನ ನಡೆಸಲು ವಯಸ್ಸು ಕೇವಲ ಸಂಖ್ಯೆ ಮಾತ್ರ ಎನ್ನುವುದನ್ನು ಈ 70 ರ ವೃದ್ಧೆ ಸಾಬೀತು ಮಾಡಿದ್ದಾರೆ. ಶಕ್ತಿ ಇರುವ ತನಕ ಸ್ವಾವಲಂಭಿಯಾಗಿ ಬದುಕಬೇಕು ಎನ್ನುವ ಛಲದಲ್ಲಿರುವ ಈ ವೃದ್ಧೆ ಈ ಕ್ಷಣದವರೆಗೂ ದುಡಿದು ಸಂಪಾದಿಸುತ್ತಿದ್ದಾರೆ. ಈ ಗಟ್ಟಿಗಿತ್ತಿ ಸ್ವಾವಲಂಭಿ ಅಜ್ಜಿ ಬೆಬೆ ಜಿ ಪಂಜಾಬ್ ನ ಜಲಂಧರ್ ನವರು. ಸದ್ಯ ಇವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಗಾಯಕ, ನಟ ದಿಲ್ಜಿತ್ ದೋಸಾಂಜ್ ಸೇರಿದಂತೆ ಹಲವರು ವಿಡಿಯೋ ನೋಡಿ ಮೆಚ್ಚಿದ್ದಾರೆ.
ಈ ಅಜ್ಜಿ ನಿತ್ಯ ಜಲಂಧರ್ ನ ಫಾಗ್ವಾರಾ ಗೇಟ್ ಮಾರುಕಟ್ಟೆ ಬಳಿ ಆಹಾರ ತಯಾರಿಸಿ ಮಾರಾಟ ಮಾಡುತ್ತಾರೆ. ಅಜ್ಜಿ ತಯಾರಿಸುವ ದಾಲ್, ಸಬ್ಜಿ ಮತ್ತು ಪರಾಟ ತಿಂದವರು ಮತ್ತೆ ಮತ್ತೆ ಇಲ್ಲಿಗೆ ಬಂದು ಅಜ್ಜಿ ಕೈ ರುಚಿ ಸವಿಯುತ್ತಾರೆ. ಅಜ್ಜಿಯ ಕೈ ರುಚಿ ನೋಡಲು ಅವಕಾಶ ನಮಗೂ ಬೇಗ ದೊರೆಯಲಿ ಅಲ್ವಾ?...
PublicNext
04/11/2020 08:18 pm