ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್‌ಸ್ಟಾ ಸೆನ್ಸೇಷನ್‌ ಕಿಲಿ ಪೌಲ್ ಗೌರವಿಸಿದ ಭಾರತೀಯ ಹೈಕಮಿಶನ್‌

ಹೊಸದಿಲ್ಲಿ: ಕೋಟ್ಯಂತರ ಭಾರತೀಯರ ಅಭಿಮಾನಕ್ಕೆ ಪಾತ್ರರಾಗಿರುವ ಇನ್‌ ಸ್ಟಾ ಸ್ಟಾರ್‌ ತಾಂಜಾನಿಯಾದ ಕಿಲಿ ಪೌಲ್‌ ಅವರಿಗೆ ತಾಂಜಾನಿಯಾದಲ್ಲಿರುವ ಭಾರತೀಯ ಹೈಕಮಿಷನ್‌ ಗೌರವ ಸಲ್ಲಿಸಿದೆ.

ಇತ್ತೀಚೆಗೆ ಭಾರತದ ರಾಯಭಾರ ಕಚೇರಿಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಕಿಲಿ ಪೌಲ್‌ ಅವರನ್ನು ಗೌರವಿಸಲಾಯಿತು ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿನಯ್‌ ಪ್ರಧಾನ್‌ ಟ್ವೀಟ್‌ ಮಾಡಿದ್ದಾರೆ.

ನಾನಾ ಸಾಂಪ್ರದಾಯಿಕ ಬಟ್ಟೆ ಧರಿಸಿ, ವೀಡಿಯೊ ಮಾಡುವ ಕಿಲಿ ಪೌಲ್‌ ಅವರು ಇನ್‌ ಸ್ಟಾಗ್ರಾಮ್‌ ನಲ್ಲಿ20 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅವರನ್ನು ಆಯುಷ್ಮಾನ್‌ ಖುರಾನಾ, ರಿಚಾ ಚಡ್ಡಾ, ಗುಲ್‌ ಪನಾಗ್‌ ಸಹಿತ ಹಲವಾರು ಮಂದಿ ತಾರೆಯರೂ ಫಾಲೋ ಮಾಡುತ್ತಿದ್ದಾರೆ.

Edited By : Nagaraj Tulugeri
PublicNext

PublicNext

23/02/2022 09:33 pm

Cinque Terre

161.63 K

Cinque Terre

1