ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕುಮಟಾ ಗಣಪನಿಗೆ ಅದ್ಧೂರಿ ವಿದಾಯ: ಗಣೇಶನ ವಿಸರ್ಜನೆಯಲ್ಲಿ ಕಂಡ ಮೋದಿ!!

ಕಾರವಾರ: ಕುಮಟಾ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪೂಜಿಸಲಾದ ಗಣಪನನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕೊಂಡೊಯ್ದು ವನ್ನಳಿ ಹೆಡ್ ಬಂದರ್‌ನಲ್ಲಿ ವಿಸರ್ಜಿಸಲಾಯಿತು.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪೂಜಿಸಲಾದ ಗಣೇಶೋತ್ಸವಕ್ಕೆ ದಶಮಾನೋತ್ಸವದ ಸಂಭ್ರಮ. ಈ ನಿಮಿತ್ತ ಸಾರ್ವಜನಿಕ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ಗಣಪನ ಮೂರ್ತಿಯನ್ನು ಅದ್ಧೂರಿ ಮೆರವಣೆಗೆಯೊಂದಿಗೆ ಪಟ್ಟಣದ ಮೀನು ಮಾರುಕಟ್ಟೆಯ ತಾರಿ ಬಾಗಿಲಿಗೆ ಕೊಂಡೊಯ್ದು, ಅಲ್ಲಿಂದ ಅಳ್ವೆದಂಡೆ ಮೀನುಗಾರರು ದೋಣಿ ಮೂಲಕ ಗಣಪನನ್ನು ವನ್ನಳಿ ಹೆಡ್ ಬಂದರ್‌ಗೆ ಕೊಂಡೊಯ್ದು ವಿಸರ್ಜಿಸಿದರು.

ಮೆರವಣಿಯಲ್ಲಿ ಉಡುಪಿಯ ಹುಲಿ ಕುಣಿತ, ಸಿದ್ದಿ ಜನಾಂಗದ ದಮಾಮಿ ನೃತ್ಯ, ಬೆಳಗಾವಿ ಹಾಗೂ ಕೊಲ್ಲಾಪುರದ ಡೊಲ್ಲು ವಾದ್ಯ, ಪೂಣಾದ ರಾಜಶ್ರೀ ಭಾಗ್ವತ್ ಅವರ ರಂಗೋಲಿ, ನವಿಲು, ಗೊಂಬೆ ನೃತ್ಯ ಸೇರಿದಂತೆ ವಿವಿಧ ವೇಷಧಾರಿಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಮತ್ತು ಸಿಡಿ ಮದ್ದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಅಲ್ಲದೇ ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಈ ವೇಳೆ ಥೇಟ್ ಪ್ರಧಾನಿ ನರೇಂದ್ರ ಮೋದಿಯಂತೆ ಕಾಣುವ ಸದಾನಂದ ನಾಯಕ್ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡರು. ಫಲಾವಳಿ, ದೇವರ ಆಭರಣ ಮತ್ತು ಪ್ರಸಾದಗಳ ಸವಾಲನ್ನು ಬರೋಬ್ಬರಿ 8.53 ಲಕ್ಷ ರೂ.ಗೆ ಭಕ್ತರು ಪಡೆದರು.

Edited By : Somashekar
PublicNext

PublicNext

08/09/2022 08:18 pm

Cinque Terre

41.06 K

Cinque Terre

1

ಸಂಬಂಧಿತ ಸುದ್ದಿ