ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಮನೆಯೊಂದರಲ್ಲಿ ಪೂಜಿಸಲ್ಪಡುತ್ತಿರುವ ಈ ಗಣೇಶ ಜಿಲ್ಲೆಯಲ್ಲೇ ಅತಿ ಶ್ರೀಮಂತ ಗಣಪನಾಗಿದ್ದು, ಚಿನ್ನಾಭರಣಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿದ್ದಾನೆ.
ಅಂಕೋಲಾ ಮಹಾಲೆ ಮನೆಯ ಈ ಗಣಪ ಅತಿ ಶ್ರೀಮಂತ. ಈ ಗಣೇಶನ ಆಭರಣಗಳೆಷ್ಟಿವೆ ಎನ್ನುವುದು ನಿಖರವಾಗಿ ತಿಳಿದಿಲ್ಲ. ಆದರೆ, ಹತ್ತಾರು ಚಿನ್ನದ ಉಂಗುರಗಳು, ಚಿನ್ನದ ಕಿರೀಟ, ಚಿನ್ನದ ಗಧೆ, ಹತ್ತಾರು ಚಿನ್ನದ ಸರಗಳು... ಹೀಗೆ ಮೈಮೇಲೆ ಪೂರ್ತಿ ಚಿನ್ನ ಧರಿಸಿ ಕುಳಿತಿರುವ ಈ ಗಣಪನ ನೋಡಲು ದೇಶದ ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಅಂದಹಾಗೆ ಈ ಮಹಾಲೆ ಮನೆ ಗಣಪತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇನ್ನು ಈ ಗಣಪತಿಯ ಬಣ್ಣ ಮನುಷ್ಯನ ಮೈಬಣ್ಣವನ್ನ ಹೋಲುತ್ತದೆ. ನೂರಾರು ವರ್ಷಗಳೇ ಕಳೆದರೂ ಈ ಬಣ್ಣ, ಗಣಪನ ಮೂರ್ತಿಯ ತೇಜಸ್ಸು ಬದಲಾಗುತ್ತಿಲ್ಲ ಎನ್ನುವುದು ವಿಶೇಷವಾಗಿದೆ.
PublicNext
05/09/2022 03:01 pm