ಚಿತ್ರದುರ್ಗ: ಶಾಲೆ ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಕ್ಕೆ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗೋದನ್ನ ನಾವೆಲ್ಲರೂ ನೊಡಿದ್ದೇವೆ. ಆದ್ರೆ ಚಿತ್ರದುರ್ಗದ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರೆ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧಿ, ನೆಹರು, ನೇತಾಜಿ ,ಚೆನ್ನಮ್ಮ ,ಓಬವ್ವನ ವೇಷ ತೊಟ್ಟು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ನಿರಾಶ್ರಿತರ ಕೇಂದ್ರ ಮುಖ್ಯ ಅಧಿಕಾರಿ ಮಹದೇವಯ್ಯ ಧ್ವಜಾರೋಹಣ ನಡೆಸಿ ಕೇಂದ್ರದಲ್ಲಿರೋ ನಿರಾಶ್ರಿತರಿಗೆ ಹಬ್ಬದೂಟ ಹಾಕಿಸಿದ್ರು. ಇನ್ನೂ ಇದ್ರ ಜೊತೆಗೆ ನಿರಾಶ್ರಿತರು ಮತ್ತು ಸಿಬ್ಬಂದಿ ದೇಶಭಕ್ತಿ ಹಾಡುಗಳಿಗೆ ಹೆಜ್ಜೆಹಾಕಿ ಖುಷಿಯಿಂದ ಸಂಭ್ರಮಿಸಿದ್ದಾರೆ.
PublicNext
15/08/2022 06:35 pm