ಉಳ್ಳಾಲ:ಇಂದು ಗುರುಪೂರ್ಣಿಮೆ ಪ್ರಯುಕ್ತ ಉಪ್ಪಳ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದ ಯತಿವರ್ಯರಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರಿಗೆ ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ಟ್ರಸ್ಟ್ ನ ವತಿಯಿಂದ ಗುರುವಂದನೆ ನಡೆಯಿತು.
ಕಾಸರಗೋಡು ಜಿಲ್ಲೆಯ ಉಪ್ಪಳ,ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮಕ್ಕೆ ತೆರಳಿದ ಸಾಯಿಪರಿವಾರ್ ಟ್ರಸ್ಟ್ ನ ಸೇವಕರು ಸ್ವಾಮೀಜಿಗಳಿಗೆ ಫಲ,ಪುಷ್ಪ,ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಿದರು.
ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಸ್ವಾಮೀಜಿಗಳು ಜ್ನಾನವಿಲ್ಲದ ಭಕ್ತಿ,ಭಕ್ತಿ ಇಲ್ಲದ ಜ್ಞಾನ ಬೆಲೆ ಇಲ್ಲದ ಒಂದು ಮುಖದ ನಾಣ್ಯವಿದ್ದಂತೆ.ಯಾವುದೇ ಸಂಪತ್ತನ್ನು ಸದ್ಭಳಕೆ ಮಾಡಲು ಮತ್ತು ಅದರ ಮಹತ್ವವನ್ನು ಅರಿಯಲು ಜ್ಞಾನ ಅತ್ಯಾವಶ್ಯಕ.ಭಕ್ತಿ ಮತ್ತು ಜ್ಞಾನದಿಂದ ವೈರಾಗ್ಯ ಪಡೆಯಲು ಗುರುಗಳ ಉಪಾಸನೆ ಅಗತ್ಯ ಎಂದರು.
ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ,ಬಿಜೆಪಿ ಪ್ರಮುಖರಾದ ಚಂದ್ರಹಾಸ್ ಪಂಡಿತ್ ಹೌಸ್,ಹಿಂದೂ ಯುವ ಸೇನೆ ಮುಖಂಡ ಭಾಸ್ಕರ ಚಂದ್ರ ಶೆಟ್ಟಿ, ಸಾಯಿ ಪರಿವಾರ್ ನ ಮಾರ್ಗದರ್ಶಕ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನ ಮನೆ,ಪ್ರಮುಖರಾದ ಪ್ರವೀಣ್ ಎಸ್.ಕುಂಪಲ,ಗಣೇಶ್ ಅಂಚನ್,ಪುರುಷೋತ್ತಮ ಕಲ್ಲಾಪು,ಮೊದಲಾದವರು ಉಪಸ್ಥಿತರಿದ್ದರು.
PublicNext
13/07/2022 05:09 pm