ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತನ್ನ ರೇಟ್‌ 10,000 ರೂ., ನಿನ್ನ ಬೆಲೆ ಎಷ್ಟು- ಕಚ್ಚಾ ಬದಾಮ್ ಬೆಡಗಿ ಹೀಗೆ ಪ್ರಶ್ನಿಸಿದ್ಯಾಕೆ?

ಸೋಶಿಯಲ್ ಮೀಡಿಯಾ ಸ್ಟಾರ್, ಕಚ್ಚಾ ಬಾದಾಮ್ ಹಾಡಿನ ಮೂಲಕ ಖ್ಯಾತಿ ಪಡೆದ ಅಂಜಲಿ ಅರೋರಾ ಪ್ರಸ್ತುತ ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಖೈದಿಯಾಗಿ ಕಾಣಿಸಿಕೊಂಡಿದ್ದಾರೆ. ಅಂಜಲಿ ಅವರು ಮಹಿಳಾ ಸಹ-ಸ್ಪರ್ಧಿಗಳೊಂದಿಗಿನ ಜಗಳ ಆಡುತ್ತಿದ್ದು, ಸಾಕಷ್ಟು ಸದ್ದು ಮಾಡುತ್ತಿದ್ದಾರೆ.

ಇತ್ತೀಚೆಗೆ ಅಂಜಲಿ ಅವರು ರಷ್ಯಾದಲ್ಲಿ ಇದ್ದ ಸಮಯವನ್ನು ಬಹಿರಂಗಪಡಿಸಿದ್ದಾರೆ. ಪಾಯಲ್ ರೋಹಟಗಿ ಮತ್ತು ವೈಲ್ಡ್ ಕಾರ್ಡ್ ಪ್ರವೇಶಾತಿ ಅಜ್ಮಾ ಫಲ್ಲಾಹ್ ಅವರೊಂದಿಗಿನ ಜಗಳದಲ್ಲಿ ಅಂಜಲಿ ರಷ್ಯಾ ನೆನಪುಗಳನ್ನು ತೆರೆದಿಟ್ಟಿದ್ದಾರೆ.

ಪಾಯಲ್ ರೋಹಟಗಿ ಅವರೊಂದಿಗಿನ ಜಗಳದ ಸಮಯದಲ್ಲಿ ಅಂಜಲಿ, "ನಾನು 5000 ರೂ. ಅಥವಾ 10,000 ರೂ.ಗೆ ಹೋಗಬಹುದು. ನಿಮ್ಮ ಮೌಲ್ಯ ಎಷ್ಟು ಎಂದು ಏಕೆ ಹೇಳಬಾರದು" ಎಂದು ಪ್ರಶ್ನಿಸಿದ್ದರು. ಈ ವಿಚಾರಕ್ಕೆ ಕಾರ್ಯಕ್ರಮದ ನಿರೂಪಕಿ, ಬಾಲಿವುಡ್‌ ನಟಿ ಕಂಗನಾ ರಣಾವತ್ ಮುಂದೆ ಅಂಜಲಿ ಸ್ಪಷ್ಟನೆ ನೀಡಿದ್ದಾರೆ.

"ನಾನು ಒಬ್ಬಳೇ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಹೋಗಿದ್ದಾಗ ಹೋಟೆಲ್‌ನ ಉಳಿದುಕೊಂಡಿದ್ದೆ. ಆಗ ನನ್ನ ಬಳಿಕ ಹಣವಿರಲಿಲ್ಲ. ಹೀಗಾಗಿ ಹೋಟೆಲ್‌ನ ಸ್ವಾಗತಕಾರನಿಗೆ 5000 ರೂಬಲ್ಸ್ (2,737 ರೂ.) ನೀಡುವಂತೆ ಕೇಳಿದ್ದೆ. ಆಗ ಆತ ಪಾರ್ಟಿಗೆ ಬರುವಂತೆ ಕೇಳಿದ್ದ. ಆತನ ಮೇಲೆ ನನಗೆ ಆಕರ್ಷಣೆ ಕೂಡ ಆಗಿದ್ದರಿಂದ ರಾತ್ರಿ ಪಾರ್ಟಿಗೆ ಹೋಗಿದ್ದೆ. ನನ್ನ ಸ್ನೇಹಿತರಿಗೆ ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ವಿಚಾರ ತಿಳಿದ ನನ್ನ ಪೋಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನನಗೆ ತಿಳಿದಿಲ್ಲ" ಎಂದು ಅಂಜಲಿ ಹೇಳಿದ್ದಾರೆ.

Edited By : Vijay Kumar
PublicNext

PublicNext

25/03/2022 03:42 pm

Cinque Terre

48.87 K

Cinque Terre

0