ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪದ ಬಳಸಿದ್ದ ಹಿನ್ನೆಲೆಯಲ್ಲಿ ಫಿಲ್ಮಂ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್ ಈಗ ಸೈಬರ್ ಕ್ರೈಂಗೆ ದೂರು ಕೊಟ್ಟಿದ್ದಾರೆ.
ಅಹೋರಾತ್ರಾ ಹಾಗೂ ಚರಣ್ ವಿರುದ್ಧವೇ ಈಗ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಪೋರೇಷನ್ ವೃತ್ತದ ಸಮೀಪ ಇರೋ ಹಸೂರು ಗೇಟ್ ಠಾಣೆಯಲ್ಲಿಯೇ ಈ ದೂರು ದಾಖಲಾಗಿದೆ.
ಸುದೀಪ್ ಕನ್ನಡದ ಅತಿ ದೊಡ್ಡ ನಟ.ಇವರ ವಿರುದ್ಧ ಅವಹೇಳನಕಾರಿ ಹೇಳಿಕೆ ಮೂಲಕ ಅವರ ಗೌರವಕ್ಕೆ ಚ್ಯುತಿ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
PublicNext
12/07/2022 09:59 am