ಮುಂಬೈ: ಬಾಲಿವುಡ್ ನಮೂವರು ನಟರು ಮನೆಗೆಲಸದಾಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಮೂವರಲ್ಲಿ ಒಬ್ಬ ನಟ ಜೈಲು ಕಂಬಿನೂ ಎಣಿಸಿ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಗ್ಯಾಂಗ್‌ಸ್ಟರ್ ಶೈನಿ ಅಹುಜಾ. ಯಾರಿಗೆ ಗೊತ್ತಿಲ್ಲ ಹೇಳಿ. ಅವರು ತಮ್ಮ ಕರಿಯರ್ ಉತ್ತುಂಗದಲ್ಲಿದ್ದಾಗಲೇ ಯಡವಟ್ಟು ಮಾಡಿಕೊಂಡರು. ಮನೆಗೆಲಸದಾಕೆ ಜೊತೆಗೆ ದೈಹಿಕ ಸಂಬಂಧಿ ಇರಿಸಿಕೊಂಡಿದ್ದರು. ದುರಾದುಷ್ಟಕ್ಕೆ ಅದು ಅತ್ಯಾಚಾರದ ರೂಪ ಪಡೆದು ಜೈಲು ಸೇರಿಯೇ ಬಿಟ್ಟರು. ಜೈಲಿನಿಂದ ಬಂದ್ಮೇಲೆ ಇಲ್ಲಿವರೆಗೂ ಈ ನಟನ ಕರಿಯರ್ ಸುಧಾರಿಸಿಯೇ ಇಲ್ಲ.
ಬಾಲಿವುಡ್‌ನ ಮತ್ತೋರ್ವ ನಟ ಆದಿತ್ಯ ಪಂಚೋಲಿ ಕೂಡ ಮನೆಗೆಲಸದಾಕೆ ಜೊತೆಗೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ ವ್ಯಕ್ತಿ. ಈ ಸತ್ಯವನ್ನಆದಿತ್ಯ ಪಂಚೋಲಿಯ ಗೆಳೆತಿ ಪೂಜಾ ಬೇಡಿ ಹೇಳಿಕೊಂಡಿದ್ದಾರೆ. ಮನಗೆಲಸದ 15 ವರ್ಷದ ಹುಡುಗಿ ಜೊತೆಗೆ ಆದಿತ್ಯ ದೈಹಿಕ ಸಂಪರ್ಕ ಬೆಳೆಸಿದ್ದ.ಆ ಹುಡುಗಿ ಕೂಡ ಅದಕ್ಕೆ ಸಮ್ಮತ್ತಿಸಿದ್ದಳು. ಆದರೆ, ಇದನ್ನ ಅತ್ಯಾಚಾರ ಅಂತಲೇ ಕರೆಯಲಾಯಿತು.ಈ ಎಲ್ಲ ವಿಷಯ ತಿಳಿದ ಬಳಿಕ ಪೂಜಾ ಬೇಡಿ,ಆದಿತ್ಯನ ಜೊತೆಗಿನ ಸಂಬಂಧ ಕಡಿದುಕೊಂಡೇ ಬಿಟ್ಟರು.
ಹಿಂದಿ ಚಿತ್ರರಂಗದ ಖ್ಯಾತ ನಟ ಓಂಪುರಿ ಕೂಡ ಮನೆಗೆಲಸದಾಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದವರೇ. ಆದರೆ, ಆಗ ಓಂಪುರಿಗೆ ಕೇವಲ 14 ವರ್ಷವೇ ಆಗಿತ್ತು.55 ವರ್ಷದ ಮನೆಗೆಲಸದಾಕೆ ಕರೆಂಟ್ ಹೋಗಿದ್ದ ಸಮಯವನ್ನೆ ಬಳಸಿಕೊಂಡಿದ್ದಳು.ಅಲ್ಲಿಗೆ ಓಂಪುರಿಗೆ ಇದು ಮೊದಲ ದೈಹಿಕ ಸಂರ್ಪಕವೇ ಆಗಿತ್ತು ಎಂದು ಓಂಪುರಿ ಪತ್ನಿ ನಂದಿತಾ ಪುರಿ ತಮ್ಮ ಅನ್‌ಲೈಕ್ಲಿ ಹೀರೋ ಓಂಪುರಿ ಪುಸ್ತಕದಲ್ಲಿಯೇ ಬರೆದುಕೊಂಡಿದ್ದಾರೆ.
PublicNext
13/06/2022 04:38 pm