ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶವವಾಗಿಯೇ ಪತ್ತೆಯಾದ ಫ್ಯಾಷನ್ ಡಿಸೈನರ್-ತಲ್ಲಣಗೊಂಡ ಫ್ಯಾಷನ್ ಲೋಕ!

ಹೈದ್ರಾಬಾದ್: ಫ್ಯಾಷನ್ ಲೋಕ ತಲ್ಲಣಗೊಂಡಿದೆ. ಈ ಝಗಮಗಿಸೋ ಲೋಕದ ಭಾರೀ ಹೆಸರು ಮಾಡಿರೋ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಈಗ ಶವವಾಗಿಯೇ ಪತ್ತೆ ಆಗಿದ್ದಾರೆ.

ಬಂಜಾರಾ ಹಿಲ್ಸ್ ನಲ್ಲಿರೋ ತಮ್ಮ ಮನೆಯಲ್ಲಿಯೇ ಡಿಸೈನರ್ ಪ್ರತ್ಯೂಷಾ ಶವವಾಗಿಯೇ (35) ಪತ್ತೆ ಆಗಿದ್ದಾರೆ. ಮೇಲ್ನೋಟಕ್ಕೆ ಈ ಸಾವು ಆತ್ಮಹತ್ಯೆ ಅಂತಲೇ ಕಂಡು ಬರುತ್ತಿದೆ. ಕೋಣೆಯಲ್ಲಿ ಕಾರ್ಬನ್ ಮಾನಾಕ್ಷ್ಸೈಡ್ ಬಾಟಲಿ ಪತ್ತೆ ಆಗಿದೆ.

ಇದನ್ನೇ ಇನ್‌ಹೇಲ್ ಮಾಡಿಯೇ ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಪ್ರತ್ಯೂಷಾ ಸಾವಿನ ಸುತ್ತ ಅನುಮಾನಗಳು ಮೂಡಿ ಬಿಟ್ಟಿವೆ.

ಫ್ಯಾಷನ್ ಲೋಕಕ್ಕೆ ಏನ್ ಆಗಿದಿಯೋ ಏನೋ. ಕಳೆದ ಕೆಲವು ವಾರಗಳಿಂದಲೂ ಮಾಡೆಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರೆಲ್ಲ ಪಶ್ಚಿಮ ಬಂಗಾಳದವರೇ ಆಗಿದ್ದಾರೆ. ಆದರೆ, ಈಗ ದಕ್ಷಿಣ ಭಾರತದ ಈ ಖ್ಯಾತ ಫ್ಯಾಷನ್ ಡಿಸೈನರ್ ಸಾವು ಫ್ಯಾಷನ್ ಲೋಕದಲ್ಲಿ ತಲ್ಲಣ ಮೂಡಿಸಿದೆ.

Edited By :
PublicNext

PublicNext

13/06/2022 01:29 pm

Cinque Terre

102.18 K

Cinque Terre

0