ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿರುವ ಡಾಕ್ಯುಮೆಂಟರಿ ಮಾದರಿಯ ಕೊನೆಯ ಚಿತ್ರ ಗಂಧದ ಗುಡಿಯ ಟೀಸರ್ ಬಿಡುಗಡೆ ಆಗಿದೆ.
ಈ ಚಿತ್ರದಲ್ಲಿ ಅಭಿಮಾನಿಗಳ ಅಪ್ಪು ಕರುನಾಡಿನ ಅರಣ್ಯ ಸಂಪತ್ತನ್ನು ಕನ್ನಡಿಗರಿಗೆ ಪರಿಚಯಿಸಲಿದ್ದಾರೆ. ಪವರ್ ಸ್ಟಾರ್ ನಮ್ಮನ್ನೆಲ್ಲ ಅಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಕಳೆಯಲಿದೆ. ಅದಕ್ಕೂ ಮುನ್ನ ಅಂದ್ರೆ ಅಕ್ಟೋಬರ್ 28ರಂದು ಈ ಚಿತ್ರ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಹೀಗಾಗಿ ಮತ್ತೆ ತೆರೆಗೆ ಅಪ್ಪಳಿಸಲಿರುವ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಚಿತ್ರದ ಬಿಡುಗಡೆ ಸಂದರ್ಭವನ್ನು ಹಬ್ಬ ಮಾಡಲು ಕಾತರರಾಗಿದ್ದಾರೆ.
ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
PublicNext
09/10/2022 11:21 am