ಮುಂಬೈ: ಹಿಂದಿ ಆವೃತ್ತಿಯ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 16ಕ್ಕೆ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಬಗ್ಗೆ ವದಂತಿಗಳು ಹರಡುತ್ತಿವೆ. ಅವರು ಈ ಸೀಸನ್‌ಗೆ 1 ಸಾವಿರ ಕೋಟಿ ಪಡೆಯಲಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಮಾತನಾಡಿರುವ ಸಲ್ಲು ಭಾಯ್, ಸಾವಿರ ಕೋಟಿ ಅಲ್ಲ. ಬದಲಾಗಿ ಅದರ ನಾಲ್ಕನೇ ಭಾಗದಷ್ಟೂ ಸಂಬಳವನ್ನು ನಾನು ಪಡೆಯುತ್ತಿಲ್ಲ. ಈ ರೀತಿ ಸುದ್ದಿ ಹಬ್ಬಿಸಿದರೆ ಆದಾಯ ತೆರಿಗೆಯವರು ನನ್ನನ್ನು ಬೆನ್ನಟ್ಟುತ್ತಾರೆ ಎಂದು ಸಲ್ಮಾನ್ ಖಾನ್ ಲೇವಡಿ ಮಾಡಿದ್ದಾರೆ.
PublicNext
28/09/2022 11:01 pm