ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಥಿಯೇಟರ್​ಗೆ ಬಂದು 'ಲವ್​ 360' ಚಿತ್ರ ನೋಡಿ; ಕೈ ಮುಗಿದು ನಿರ್ದೇಶಕ ಶಶಾಂಕ್​ ಮನವಿ

'ಜಗವೇ ನೀನು ಗೆಳತಿಯೇ..' ಹಾಡಿನ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ 'ಲವ್​ 360'. ಹೊಸಬರ ಸಿನಿಮಾದ ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಕಂಡಿರುವುದು ವಿಶೇಷ. ಆ ಕಾರಣದಿಂದ ಹೈಪ್​ ಹೆಚ್ಚಾಯಿತು. ಆದರೆ ದೊಡ್ಡಮಟ್ಟದಲ್ಲಿ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿಲ್ಲ ಎಂದು ನಿರ್ದೇಶಕ ಶಶಾಂಕ್ ಅಳಲು ತೋಡಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಹೊಸ ಮುಖಗಳಿಗೆ ಪ್ರೋತ್ಸಾಹ ನೀಡುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಣೆ ಮಾಡುವಂತೆ ಪ್ರೇಕ್ಷಕರಲ್ಲಿ ನಿರ್ದೇಶಕ ಶಶಾಂಕ್ ಕೈಮುಗಿದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸ್ಯಾಂಡಲ್‌ವುಡ್‌ನ ಹಲವಾರು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಯೋಗರಾಜ್ ಭಟ್‌ ಕೂಡ ಬೆಂಬಲ ಸೂಚಿಸಿದ್ದಾರೆ.

ಲವ್​ 360 ಚಿತ್ರದಲ್ಲಿ ಹೊಸ ಪ್ರತಿಭೆ ಪ್ರವೀಣ್ ನಾಯಕರಾಗಿದ್ದಾರೆ. ಅವರಿಗೆ ರಚನಾ ಇಂದರ್ ಜೋಡಿಯಾಗಿದ್ದಾರೆ. ಹೊಸ ಮುಖಗಳಿಗೆ ಶಶಾಂಕ್ ಆ್ಯಕ್ಷನ್‌ ಕಟ್‌ ಹೇಳಿರುವುದು ವಿಶೇಷ.

Edited By : Vijay Kumar
PublicNext

PublicNext

22/08/2022 01:05 pm

Cinque Terre

57.33 K

Cinque Terre

1