ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಮೂಲಕ ಕಪೂರ್ ಹಾಗೂ ಅಹೂಜಾ ಕುಟುಂಬದಲ್ಲಿ ಸಂತಸ ಮೂಡಿದೆ.
ಈ ಖುಷಿ ವಿಚಾರವನ್ನು ಸೋನಂ ಕಪೂರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಆಗಸ್ಟ್ 20ರಂದು ನಾವು ನಮ್ಮ ಗಂಡು ಮಗುವನ್ನು ಬರಮಾಡಿಕೊಂಡಿದ್ದೇವೆ. ನಮ್ಮ ಈ ಜರ್ನಿಗೆ ಸಪೋರ್ಟ್ ಮಾಡಿದ ಎಲ್ಲಾ ವೈದ್ಯರು, ನರ್ಸ್, ಸ್ನೇಹಿತರು ಹಾಗೂ ಕುಟುಂಬಕ್ಕೆ ಧನ್ಯವಾದಗಳು. ಇದು ಆರಂಭ ಅಷ್ಟೇ. ನಮ್ಮ ಜೀವನ ಇನ್ಮುಂದೆ ಬದಲಾಗಲಿದೆ ಎಂಬುದು ನಮಗೆ ಗೊತ್ತಿದೆ" ಎಂದು ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಸೋನಂ ಕಪೂರ್ ಹಾಗೂ ಆನಂದ್ ಅಹುಜಾಗೆ ನಟಿ ಶಿಲ್ಪಾ ಶೆಟ್ಟಿ, ಕೃತಿ ಸನೊನ್, ಕತ್ರಿನಾ ಕೈಫ್, ಮಲೈಕಾ ಅರೋರಾ, ಜಾಕ್ವೆಲಿನ್ ಫರ್ನಾಂಡಿಸ್, ಮಾಧುರಿ ದೀಕ್ಷಿತ್ ಸೇರಿದಂತೆ ಅನೇಕ ತಾರೆಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಹಾಗೂ ಸೋನಂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆಯಾಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.
PublicNext
21/08/2022 10:18 am