ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡ್ ಇಲ್ಲದಿದ್ದರೆ 3 ದಿನ ಸ್ನಾನ ಮಾಡಲ್ಲ ಎಂದ ಸೋನು ಗೌಡ; ವೀಕ್ಷಕರಿಗೆ ಮುಜುಗರ ತರಿಸಿದ ಮಾತು!

ಕೆಲವೊಮ್ಮೆ ಬಿಗ್ ಬಾಸ್ ಮನೆ ಪ್ರಜ್ಞಾವಂತರಿಗೆ ಮುಜುಗರ ಹುಟ್ಟಿಸುವ ಘಟನೆಗಳಿಂದ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಪೂರ್ವನಿಯೋಜಿತ ಚಿತ್ರೀಕರಣ ಎಂದು ಅನಿಸುತ್ತದೆ. ಆದರೆ ಇದೆಲ್ಲದರ ನಡುವೆಯೂ ಬಿಗ್ ಬಾಸ್ ಜನಪ್ರಿಯತೆ ಮಾತ್ರ ಹೆಚ್ಚುತ್ತಾ ಹೋಗುತ್ತದೆ.

ಮೊನ್ನೆಯ ವೀಕ್ ಎಂಡ್ ಕಾರ್ಯಕ್ರಮದಲ್ಲಿ ನಟಿ ಸೋನು ಗೌಡ ಮೂಡ್ ಇಲ್ಲದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಾಗಿ ಸೋನು ಶ್ರೀನಿವಾಸ್ ಗೌಡ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.

3 ದಿನಗಳಿಂದ ಸ್ನಾನ ಮಾಡಿಲ್ಲ ಎಂಬ ಸತ್ಯವನ್ನು ಸೋನು ಗೌಡ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮೊದಲ ವಾರ ಪಂಚಾಯತಿ ನಡೆಸಿದ್ದಾರೆ. ಈ ವೇಳೆ ಹಲವು ವಿಷಯಗಳ ಚರ್ಚೆ ನಡೆದಿದೆ. ಈ ಸಂಚಿಕೆ ಬಹಳಷ್ಟು ತಮಾಷೆಯ ಪ್ರಸಂಗಗಳಿಗೆ ಸಾಕ್ಷಿಯಾಯಿತು. ಆಶ್ಚರ್ಯವೆಂದರೆ, ‘ಮೂಡ್ ಬರದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ’ ಎಂದರು. ಇದನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕ ಪ್ರಸಂಗ ನಡೆದಿದೆ.

Edited By : Abhishek Kamoji
PublicNext

PublicNext

16/08/2022 07:44 pm

Cinque Terre

22.67 K

Cinque Terre

5