ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ ಅವರು 'ಹರ್ ಘರ್ ತಿರಂಗಾ' ಅಭಿಯಾನದ ಭಾಗವಾಗಿ ಶುಕ್ರವಾರ ಮುಂಬೈನ ನಿವಾಸದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ' ಅಭಿಯಾನವನ್ನು ಪರಿಚಯಿಸಿದ್ದಾರೆ.
ಇನ್ನು ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾಗೆ ಜನರಿಂದ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಅಸಹಿಷ್ಣತೆ ಕುರಿತು ಆಮಿರ್ ಖಾನ್ ನೀಡಿದ್ದ ಹೇಳಿಕೆಯನ್ನೇ ಇಟ್ಟುಕೊಂಡು ಈಗಲೂ ಅವರ ಚಿತ್ರವನ್ನು ಬಹಿಷ್ಕರಿಸುವ ಟ್ರೆಂಡ್ ಜಾರಿಯಲ್ಲಿದೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಟ್ಟಿದೆ.
ಟ್ವಿಟ್ಟರ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾವನ್ನು ಬಹಿಷ್ಕರಿಸಿ' ಎಂಬ ಟ್ರೆಂಡ್‌ಗೆ ಪ್ರತಿಕ್ರಿಯಿಸಿದ ಆಮಿರ್ ಖಾನ್, "ಕೆಲವರಲ್ಲಿ ನನ್ನಿಂದ ಬೇಸರವಾಗಿದೆ. ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ಸುಳ್ಳು" ಎಂದು ಹೇಳಿದ್ದಾರೆ.
PublicNext
13/08/2022 06:24 pm