ಬೆಂಗಳೂರು: ಕನ್ನಡದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ಚಿತ್ರರಂಗಕ್ಕೆ ವಾಪಸ್ ಬರೋ ಪ್ಲಾನ್ ಮಾಡುತ್ತಿದ್ದಾರೆ. ಸಿನಿಮಾದಿಂದ ದೂರವೇ ಉಳಿದ ಈ ನಟಿಯ ಕಮ್ ಬ್ಯಾಕ್ ಅನ್ನ ಸಿನಿಪ್ರೇಮಿಗಳೂ ಹಾಗೂ ರಮ್ಯಾ ಫ್ಯಾನ್ಸ್ ಎದುರು ನೋಡುತ್ತಿದ್ದು ಇದೇ ವೇಳೆನೆ ರಮ್ಯಾ ಅವರ ಈ ಒಂದು ಫೋಟೋ ಗಮನ ಸೆಳೆಯುತ್ತಿದೆ.
ನಟಿ ರಮ್ಯಾ ತಮ್ಮ 18ನೇ ವಯಸ್ಸಿನಲ್ಲಿ ತೆಗೆಸಿಕೊಂಡು ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಇದು ನನ್ನ ಕಾಲೇಜು ದಿನದ ಫೋಟೋ" ಅಂತಲೂ ಹೇಳಿಕೊಂಡಿದ್ದಾರೆ.
ಅಂದ್ಹಾಗೆ ರಮ್ಯಾ 21 ವಯಸ್ಸಿಗೇನೆ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟರು.ಅಪ್ಪು ಜೊತೆಗೆ ಅಭಿ ಮೂಲಕ ಬೆಳ್ಳಿ ತೆರೆಗೆ ಬಂದರು. ಹಿಟ್ ಕೂಡ ಆದರು. ಈಗ ಮತ್ತೆ ವಾಪಸ್ ಇಂಡಸ್ಟ್ರೀಗೆ ಬರೋಕೆ ಪ್ಲಾನ್ ಮಾಡುತ್ತಿದ್ದಾರೆ.
PublicNext
03/08/2022 09:20 pm