ಮುಂಬೈ: ಬಾಲಿವುಡ್ ನ ನಟ-ನಿರ್ದೇಶಕ ಕರಣ್ ಜೋಹರ್ ಸೆಲೆಬ್ರಿಟಿಗಳ ಸೆಕ್ಸ್ ಲೈಫ್ ಬಗ್ಗೆ ಓಪನ್ ಆಗಿಯೇ ಪ್ರಶ್ನೆ ಕೇಳ್ತಾರೆ. ತಮ್ಮ ಕಾಫಿ ವಿತ್ ಕರಣ್ 7 ನೇ ಸೀಜನ್ ಶೋಗೆ ಬಂದ ಕರೀನಾ ಕಪೂರ್ ಗೆ ಇದೇ ರೀತಿ ಸೆಕ್ಸ್ ಲೈಫ್ ಬಗ್ಗೆ ಕ್ವಶ್ಚನ್ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ಆಮೀರ್ ಖಾನ್, ಕರಣ್ ಜೋಹರ್‌ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು. ಕರಣ್ ಜೋಹರ್ ಕೇಳೋ ವೈಯುಕ್ತಿಕ ಪ್ರಶ್ನೆಗಳಿಗೆ ಕೆಲವ್ರು ಉತ್ತರ ಕೊಡ್ತಾರೆ. ಇನ್ನೂ ಕೆಲವ್ರು ಏನೋ ಒಂದು ಹೇಳಿ ಟಾಂಗ್ ಕೊಡ್ತಾರೆ. ಆದರೆ, ಕರೀನಾ ಕಪೂರ್‌ಗೆ ಕರಣ್ ಜೋಹರ್ ಇಂತಹದ್ದೇ ಪ್ರಶ್ನೆ ಕೇಳಿದ್ದಾರೆ. "ಮಗು ಆದ್ಮೇಲೆ ಸೆಕ್ಸ್ ಲೈಫ್ ಗುಣಮಟ್ಟ ಹೇಗಿರುತ್ತದೆ" ಎಂದು ಪ್ರಶ್ನೆ ಮಾಡಿದ್ದಾರೆ.
ಆ ಪ್ರಶ್ನೆಗೆ ಕರೀನಾ ಕಪೂರ್ ನೇರವಾಗಿ ಉತ್ತರ ಏನೂ ಕೊಟ್ಟಿಲ್ಲ. ಬದಲಾಗಿ ಕರಣ್ ಜೋಹರ್ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿ ಬಿಟ್ಟಿದ್ದಾರೆ. ಇದರಿಂದ ಕೊಂಚ ವಿಚಲಿತರಾಗಿದ್ದ ಕರಣ್ ಜೋಹರ್, ಈ ಶೋವನ್ನ ನನ್ನ ತಾಯಿ ನೋಡ್ತಾಯಿರ್ತಾರೆ. ಈ ತರ ಪ್ರಶ್ನೆ ಕೇಳ್ಬೇಡಿ ಅಂತಲೇ ಕರಣ್ ಜೋಹರ್ ಹೇಳ್ತಾರೆ.
ಆದರೆ, ಈ ಒಂದು ಮಾತಿಗೆ ಆಮೀರ್ ಖಾನ್ ಸುಮ್ಮನೆ ಕೂಡೋದಿಲ್ಲ. ಬದಲಾಗಿ, ಕರಣ್ ಜೋಹರ್ ಗೆ ಆಮೀರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ಮಾತನಾಡೋವಾಗ ನಿನ್ನ ತಾಯಿ ಈ ಶೋ ನೋಡೋದಿಲ್ಲವೇ ಅಂತಲೇ ಆಮೀರ್ ಖಾನ್ ಪ್ರಶ್ನೆ ಮಾಡಿದ್ದಾರೆ. ಆಗ ಮತ್ತೆ ಕರಣ್ ಜೋಹರ್ ಮಂಕಾಗಿ ಬಿಟ್ಟಿದ್ದಾರೆ. ವಿಶೇಷವೆಂದ್ರೆ ಈ ಶೋದ ಈ ಪ್ರಮೋವನ್ನ ಸ್ವತಃ ಕರಣ್ ಜೋಹರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PublicNext
02/08/2022 11:13 pm