ಮುಂಬೈ:ಬಾಲಿವುಡ್‌ನ ನಾಯಕಿ ನಟಿ ಜಾಹ್ನವಿ ಕಪೂರ್ ಮನೆ ಮಾರಿಕೊಂಡಿದ್ದಾರೆ. ಮುಂಬೈನ ಪ್ರತಿಷ್ಠಿತ ಏರಿಯಾ ಜುಹೂನಲ್ಲಿರೋ ಅಪಾರ್ಟ್‌ಮೆಂಟ್‌ನಲ್ಲಿರೋ 14,15,16ನೇ ಫ್ಲಾಟ್ ಅನ್ನ ಈಗ ಮಾರಿಕೊಂಡು ಐದು ಕೋಟಿ ಲಾಭ ಕೂಡ ಮಾಡಿಕೊಂಡಿದ್ದಾರೆ.
ಜಾಹ್ನವಿ ಕಪೂರ್ ಅವರು 2020 ರಲ್ಲಿ 39 ಕೋಟಿ ರೂಪಾಯಿ ಕೊಟ್ಟು ಈ ಫ್ಲಾಟ್ ಖರೀದಿಸಿದ್ದರು. ಆದರೆ, ಈ ಪ್ರಾಪರ್ಟಿಗೆ ಭಾರೀ ಬೇಡಿಕೆ ಬಂದಿದೆ. ಅದಕ್ಕೇನೆ 44 ಕೋಟಿಯಷ್ಟು ಕೊಟ್ಟು ಬಾಲಿವುಡ್‌ನ ನಾಯಕನೊಬ್ಬ ಜಾಹ್ನವಿಯ ಈ ಫ್ಲಾಟ್ ಖರೀದಿಸಿದ್ದಾರೆ.
ಹೌದು. ಜಾಹ್ನವಿ ಕಪೂರ್ ಫ್ಲಾಟ್ ಅನ್ನ ಖರೀದಿಸಿದವ್ರು ಬೇರೆ ಯಾರೋ ಅಲ್ಲ. ಸದ್ಯದ ವಿಭಿನ್ನ ಕಲಾವಿದ ನಟ ರಾಜಕುಮಾರ್ ರಾವ್, ತಮ್ಮ ವಿಭಿನ್ನ,ಸರಳ ಅಭಿನಯದಿಂದಲೇ ಗಮನ ಸೆಳೆದ ನಟ ರಾಜಕುಮಾರ್ ರಾವ್, ಮುಂಬೈನ ಈ ಪ್ರತಿಷ್ಠಿತ ಏರಿಯಾದಲ್ಲಿ ಫ್ಲಾಟ್ ಖರೀದಿಸಿ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ.
PublicNext
02/08/2022 03:56 pm