ಮುಂಬೈ: ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಕನ್ನಡದ ವಿಕ್ರಾಂತ್ ರೋಣ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಗೆಳೆಯ ಹಾಗೂ ನಾಯಕ ನಟ ಕಿಚ್ಚ ಸುದೀಪ್ ಜೊತೆಗೆ ನೃತ್ಯ ಮಾಡಿರೋದು ವಿಶೇಷ. ಇವರ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಕ್ರಾಂತ್ ರೋಣ ಚಿತ್ರ ಇದೇ ಜುಲೈ-28 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಕಿಚ್ಚ ಸುದೀಪ್ ಮುಂಬೈ ಅಲ್ಲೂ ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದಾರೆ. ಇದೇ ಪ್ರಮೋಷನ್ ಕಾರ್ಯಕ್ರಮದಲ್ಲಿಯೇ ಸಲ್ಮಾನ್ ಖಾನ್ ಗೆಸ್ಟ್ ಆಗಿಯೇ ಬಂದಿದ್ದರು.
ನಿಜ,ಜುಲೈ-25 ರಂದು ನಡೆದ ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಮತ್ತು ಕಿಚ್ಚ ಸುದೀಪ್ ತಮ್ಮ ತಮ್ಮ ಇಂಡಸ್ಟ್ರೀ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ರಕ್ಕಮ್ಮ ಖ್ಯಾತಿಯ ನಟಿ ಜಾಕ್ವಲಿನ್ ಜೊತೆಗೆ ನೃತ್ಯ ಮಾಡಿ ಖುಷಿಪಟ್ಟಿದ್ದಾರೆ.
PublicNext
26/07/2022 02:56 pm