ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗನ್ ಹಿಡಿದು ರೆಡಿ ಟು ಶೂಟ್ ಅಂತವ್ರೆ "ಪಠಾಣ್" ದೀಪಿಕಾ ಪಡುಕೋಣೆ!

ಮುಂಬೈ: ಬಾಲಿವುಡ್ ನಾಯಕಿ ನಟಿ ದೀಪಿಕಾ ಪಡುಕೋಣೆ ಹೊಸ ಅವತಾರ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಆಕ್ಷನ್ ಪಾತ್ರದ ಮೂಲಕ ಗನ್ ಹಿಡಿದು ರೆಡಿ ಟು ಶೂಟ್ ಅನ್ನೋ ಗತ್ತಿನಲ್ಲಿಯೇ ದೀಪಿಕಾ ಕೆಂಗಣ್ಣಿನಿಂದ ಕೆಕ್ಕರಿಸುತ್ತಿದ್ದಾರೆ.

ಹೌದು. ಪಠಾಣ್ ಚಿತ್ರದ ಮೂಲಕ ದೀಪಿಕಾ ಈ ಒಂದು ಉಗ್ರರೂಪದಲ್ಲಿ ಕಾಣಿಸಿಕೊಳ್ತಿದ್ದಾರೆ. ಆಕ್ಷನ್ ಸಿನಿಮಾ ಮಾಡದೇ ಇರೋ ದೀಪಿಕಾ, ಈ ಚಿತ್ರದಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಕಿಕ್ ಕೊಡೊಕೆ ಬರ್ತಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ನ ಈ ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಕೂಡ ಇದೆ. ಅದೇ ಮಿಸ್ಟರ್ ಶಾರುಕ್ ಖಾನ್. ಶಾರುಕ್ ಖಾನ್ ಮತ್ತು ದೀಪಿಕಾ ಈ ಚಿತ್ರದ ಮುಖಾಂತರ ಮೂರನೇ ಬಾರಿ ಜೋಡಿ ಆಗಿದ್ದಾರೆ. ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೆಸ್ , ಹ್ಯಾಪಿ ನ್ಯೂ ಇಯರ್, ಬಳಿಕ ಈಗ ಪಠಾಣ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಜಾನ್ ಅಬ್ರಹಾಂ ಕೂಡ ನಟಿಸಿರೋದು ವಿಶೇಷ. ಸಿದ್ದಾರ್ಥ ಆನಂದ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಮುಂದಿನ ವರ್ಷ ಜನವರಿ-25 ರಂದು ಚಿತ್ರ ಹಿಂದಿ, ತಮಿಳು,ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

Edited By :
PublicNext

PublicNext

26/07/2022 12:45 pm

Cinque Terre

65.58 K

Cinque Terre

3