ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಅಭಿನಯದ "ಲಕ್ಕಿ ಮ್ಯಾನ್" ಟೀಸರ್ ರಿಲೀಸ್ !

ಬೆಂಗಳೂರು: ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಲಕ್ಕಿ ಮ್ಯಾನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿಯೇ ಅಪ್ಪು ಕಾಣಿಸಿಕೊಂಡಿದ್ದು, ಈಗ ಬಿಟ್ಟಿರೋ ಟೀಸರ್‌ನಲ್ಲಿ ಅಪ್ಪು ನಿರ್ವಹಿಸಿ ಹೋದ ಪಾತ್ರದ ಝಲಕ್ ಇದೆ.

ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಅಭಿನಯದ ಈ ಚಿತ್ರದಲ್ಲಿ ಪವರ್ ಪುನಿತ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ವಿಭಿನ್ನ ರೀತಿಯಲ್ಲಿಯೇ ಡ್ಯಾನ್ಸ್ ಕೂಡ ಮಾಡಿದ್ದಾರೆ. ವಿಶೇಷವೆಂದ್ರೆ, ವಿಶೇಷ ಅತಿಥಿ ಪಾತ್ರದಲ್ಲಿ ಪ್ರಭು ದೇವ ಕೂಡ ನೃತ್ಯ ಮಾಡಿದ್ದಾರೆ.

ಸೆಪ್ಟಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರವನ್ನ ಎಸ್.ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಮತ್ತು ವಿಕ್ಕಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸದ್ಯಕ್ಕೆ ಚಿತ್ರದ ಟೀಸರ್ ಹೊರ ಬಂದು ಹಂಗಾಮಾ ಮಾಡ್ತಾ ಇದೆ.

Edited By :
PublicNext

PublicNext

25/07/2022 03:39 pm

Cinque Terre

29.04 K

Cinque Terre

0