ಹಾಲಿವುಡ್‌ನ ನಾಯಕ ನಟ ಜಾನಿ ಡೆಪ್ ಮಾಜಿ ಪತ್ನಿ ಅಂಬರ್ ಹರ್ಡ್ ಆಸೆಯೊಂದನ್ನ ಈಡೇರಿಸಿದ್ದಾರೆ. ಹೌದು. ಮಾಜಿ ಪತ್ನಿಯ ಆ ಆಸೆ ಏನೂ ಗೊತ್ತೆ.ಬನ್ನಿ, ಹೇಳ್ತಿವಿ.
ಹಾಲಿವುಡ್ ನಾಯಕ ನಟ ಜಾನಿ ಡೆಪ್ ಮೇಲೆ ಮಾಜಿ ಪತ್ನಿ ಅಂಬರ್ ಹರ್ಡ್ ಮಾನ ನಷ್ಟ ಮೊಕ್ಕದ್ದೆ ಹೂಡಿದ್ದರು. ಅದಕ್ಕೂ ಮೊದಲೇ, ಈ ಕೇಸ್ ನಲ್ಲಿ ಗೆದ್ದರೇ, ಲಾಸ್‌ಏಂಜಲಿಸ್‌ನ ಮಕ್ಕಳ ಆಸ್ಪತ್ರೆಗೆ 100 ಮಿಲಿಯನ್ ದೇಣಿಗೆ ನೀಡೋದಾಗಿಯೂ ಹೇಳಿದ್ದರು.ಆದರೆ, ಈ ಕೇಸ್ ನಲ್ಲಿ ಅಂಬರ್ ಹರ್ಡ್ ಸೋತು ಹೋದರು.
ಆದರೆ, ಮಾಜಿ ಪತ್ನಿಯ ಈ ಆಸೆಯನ್ನ ಜಾನಿ ಡೆಪ್ ಈಗ ಪರೋಕ್ಷವಾಗಿಯೇ ಈಡೇರಿಸಿದಂತಿದೆ. ನಿಜ, NFTಗಳ ಮಾರಾಟದಿಂದಲೇ ಬಂದ ಹಣ ದತ್ತಿಗಳಿಗೆ ದಾನ ಮಾಡಿದ್ದಾರೆ. ಇದರಲ್ಲಿ ಅಂಬರ್ ಹರ್ಡ್ ದೇಣಿಗೆ ಕೊಡಬೇಕೆಂದಿದ್ದ ಲಾಸ್ ಏಂಜಲಿಸ್ ಮಕ್ಕಳ ಆಸ್ಪತ್ರೆ ಕೂಡ ಸೇರಿರೋದು ವಿಶೇಷ.
PublicNext
09/07/2022 01:34 pm