ಚೆನ್ನೈ: ಕಾಲಿವುಡ್ ನಾಯಕ ನಟ ಚಿಯಾನ್ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಹೃದಯಾಘಾತ ಆಗಿದೆ. ಹೀಗೆ ಸುದ್ದಿ ಹರಿದಾಡುತ್ತಲೇ ಇದೆ.ಆದರೆ ಈ ಸುದ್ದಿಗೆ ವಿಕ್ರಮ್ ಮ್ಯಾನೇಜರ್ ತೆರೆ ಎಳೆದು ಹೃದಯಾಘಾತದ ಸುದ್ದಿ ಸುಳ್ಳು ಅಂತಲೇ ಹೇಳಿ ಬಿಟ್ಟಿದ್ದಾರೆ.
ನಟ ವಿಕ್ರಮ್ ಸದ್ಯ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲಿಯೇ ಇರೋ ವಿಕ್ರಮ್ ಮ್ಯಾನೇಜರ್ ಸೂರ್ಯನಾರಾಯಣ ಎಂ ಟ್ವಿಟರ್ ಮೂಲಕವೇ ಅಸಲಿ ವಿಷಯವನ್ನ ಹೇಳಿಕೊಂಡಿದ್ದಾರೆ.
ಆತ್ಮೀಯ ಅಭಿಮಾನಿಗಳೇ ಮತ್ತು ಹಿತೈಷಿಗಳೇ.. ಚಿಯಾನ್ ವಿಕ್ರಮ್ ಅವರಿಗೆ ಸಣ್ಣದಾಗಿಯೇ ಎದೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆ ಕೂಡ ಮುಂದುವರೆದಿದೆ.ಆದರೆ, ವಿಕ್ರಮ್‌ಗೆ ಹೃದಯಾಘಾತ ಆಗಿದೆ ಅನ್ನೊದು ಸುಳ್ಳು. ಈ ವದಂತಿ ಕೇಳಿ ನಮಗೆ ತುಂಬಾ ನೋವಾಗಿದೆ ಅಂತಲೇ ಸೂರ್ಯನಾರಾಯಣ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
PublicNext
08/07/2022 07:13 pm