ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಲ್ಡನ್ ಗಣಿ ಜನ್ಮದಿನಕ್ಕೆ ಗಾಳಿಪಟ-2 ಹಾಡಿನ ಗಿಫ್ಟ್ !

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಜನ್ಮ ದಿನಕ್ಕೆ ಇಂದು ಗಾಳಿಪಟ-2 ಚಿತ್ರದ ಸುಮಧುರ ಹಾಡೊಂದು ರಿಲೀಸ್ ಆಗಿದೆ. ಸೋನು ನಿಗಮ್ ಗಾನ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿಯೇ ಈ ಒಂದು ಗೀತೆ ಹೊರ ಬಂದಿದ್ದು, ಸಂಗೀತ ಪ್ರಿಯರ ಹೃದಯ ತಟ್ಟುವಂತೇನೆ ಇದೆ.

ನಾನಾಡಾದ ಮಾತೆಲ್ಲವ ಅಂತಲೇ ಶುರು ಆಗೋ ಈ ಗೀತೆಗೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಬರ್ತಿರೋ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಟಿ ವೈಭವಿ ಜೋಡಿ ಆಗಿದ್ದು, ಸದ್ಯಕ್ಕೆ ಹೊರ ಬಂದ ಈ ಗೀತೆಯಲ್ಲಿ ಚಿತ್ರದ ಮೇಕಿಂಗ್ ವೀಡಿಯೋ ಕೂಡ ಇರೋದು ವಿಶೇಷ.

ಪಾರ್ಟ್ ಒನ್ ಗಾಳಿಪಟ ಚಿತ್ರ ವೀಕ್ಷಿಸಿದ ಸಿನಿಪ್ರೇಮಿಗಳು, ಗಾಳಿಪಟ-2 ಬಗ್ಗೆನೂ ಒಂದು ಕುತೂಹಲ ಇಟ್ಟುಕೊಂಡಿದ್ದಾರೆ. ಚಿತ್ರದ ಹಾಡು ಮತ್ತು ಟೀಸರ್ ಈಗಲೇ ಭರವಸೆ ಮೂಡಿಸಿವೆ.

Edited By :
PublicNext

PublicNext

02/07/2022 03:58 pm

Cinque Terre

75.98 K

Cinque Terre

0