ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಸಂಗೀತದಿಂದಲು ಜನರ ಹೃದಯ ಕದ್ದಿದೆ. ಈಗ ಇದೇ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ ಅವರಿಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಈಗೊಂದು ಆಫರ್ ಕೊಟ್ಟಿದ್ದಾರೆ.
ಸಲ್ಮಾನ್ ಖಾನ್ ಅಭಿನಯದಲ್ಲಿ "ಕಭಿ ಈದ್ ಕಭಿ ದಿವಾಲಿ" ಚಿತ್ರ ರೆಡಿ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ಪುಷ್ಪ ಚಿತ್ರದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸಂಗೀತ ಕೊಟ್ಟಿದ್ದರು. ಅದು ತಮ್ಮ ಕಥೆಗೆ ಸರಿ ಹೋಗ್ತಿಲ್ಲ ಅಂತಲೇ ಸಲ್ಮಾನ್ ಅದನ್ನ ರಿಜೆಕ್ಟ್ ಮಾಡಿದ್ದಾರೆ.
ಇದೇ ಅವಕಾಶವೇ ಈಗ ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿಯೇ ಕಭಿ ಈಜ್ ಕಭಿ ದಿವಾಲಿ ಚಿತ್ರದ ಹಿನ್ನೆಲೆಯ ಸಂಗೀತವನ್ನ ಈಗ ರವಿ ಬಸ್ರೂರು ಮಾಡಿಕೊಡ್ತಿದ್ದಾರೆ.
ಚಿತ್ರದ ಎರಡು ಹಾಡುಗಳಿಗೂ ರವಿಯ ಸಂಗೀತ ಸಂಯೋಜನೆ ಇರುತ್ತದೆ. ಅಂದ್ಹಾಗೆ ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ "ಅಂತಿಮ್" ಚಿತ್ರಕ್ಕೂ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಆ ಗೆಳೆತನವೇ ಈಗ ಇಲ್ಲೂ ವರ್ಕ್ ಆಗಿದೆ.
PublicNext
01/07/2022 03:45 pm