ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಟ್ನಂಜ-ಮೊಮ್ಮಗ ಖ್ಯಾತಿಯ ನಟಿ ಮೀನಾ ಪತಿ ವಿದ್ಯಾಸಾಗರ ವಿಧಿವಶ

ಚೆನ್ನೈ: ದಕ್ಷಿಣ ಭಾರತದ ಹೆಸರಾಂತ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ ವಿಧಿವಶರಾಗಿದ್ದಾರೆ. ಸೋಮುವಾರ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾಸಾಗರ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲವು ತಿಂಗಳಿನಿಂದಲೂ ವಿದ್ಯಾಸಾಗರ್ ಶ್ವಾಸಕೋಶದ ತೊಂದರೆಯಿಂದಲೇ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. 48 ವರ್ಷದ ವಿದ್ಯಾಸಾಗರ್ ಅವರಿಗೆ ಕೋವಿಡ್ ಸೋಂಕು ಕೂಡ ತಗುಲಿತ್ತು.

ಬೆಂಗಳೂರು ಮೂಲದ ವಿದ್ಯಾಸಾಗರ್ ಮತ್ತು ನಟಿ ಮೀನಾ 2009 ರಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ ನೈನಿಕಾ ಹೆಸರಿನ ಮಗಳು ಕೂಡ ಇದ್ದಾಳೆ.

ಮೀನಾ ಪತಿ ವಿದ್ಯಾಸಾಗರ ನಿಧನಕ್ಕೆ ಇಂಡಸ್ಟ್ರೀಯ ಸ್ಟಾರ್ ನಟರು-ಕಲಾವಿದರು ಸಂತಾಪ ಸೂಚಿಸಿದ್ದಾರೆ.

Edited By :
PublicNext

PublicNext

29/06/2022 10:00 am

Cinque Terre

67.32 K

Cinque Terre

6