ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಯಸ್ಸು 51 ಆದರೂ ನಟಿ ಟಬು ಇನ್ನೂ ಒಂಟಿಯಾಗಿರುವುದಕ್ಕೆ ಕಾರಣ ಇವರೇ ಅಂತೆ.!

ನೀವು 90ರ ದಶಕದಲ್ಲಿ ಹಿಂದಿ ಸಿನಿಮಾಗಳನ್ನು ನೋಡಿದ್ದರೆ, ಒಂದು ಜೋಡಿ ಮಾತ್ರ ನಿಮ್ಮನ್ನು ತುಂಬಾನೇ ಮೋಡಿ ಮಾಡಿರುತ್ತದೆ. ಆ ಜೋಡಿ ಯಾವುದು ಅಂತ ನಿಮಗೆ ಹೇಳುವ ಮುಂಚೆಯೇ ಬಹುತೇಕರು ಆ ಜೋಡಿ ನಟ ಅಜಯ್ ದೇವಗನ್ ಮತ್ತು ನಟಿ ಟಬು ಅವರದ್ದು ಅಂತ ಊಹಿಸಿರುತ್ತೀರಿ. ಅದರಲ್ಲೂ 1994ರಲ್ಲಿ ಬಿಡುಗಡೆಯಾದ 'ವಿಜಯಪಥ್' ಚಿತ್ರ ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ, ಆ ಸುಮಧುರವಾದ ಹಾಡುಗಳು, ಚಿತ್ರದ ಕಥೆ ಮತ್ತು ಅಜಯ್ ಮತ್ತು ಟಬು ನ ಜೋಡಿ ಯಾವುದನ್ನೂ ಅಭಿಮಾನಿಗಳುಇವತ್ತಿಗೂ ಮರೆತಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬಹುಭಾಷಾ ತಾರೆಯಾಗಿರೋ ಟಬು ಬಾಲಿವುಡ್‌ನಲ್ಲೂ ನೇಮ್-ಫೇಮ್ ಗಳಿಸಿದವರು. 51 ವರ್ಷದ ಟಬು ಈಗಲೂ ಸ್ಕ್ರೀನ್ ಮೇಲೆ ಬಂದರೆ ಪಡ್ಡೆ ಹೈಕಳು ಫಿದಾ ಆಗಿ ಬಿಡ್ತಾರೆ. ಅಪರೂಪದ ಸುಂದರಿ, ಸಿನೆಮಾ ಜಗತ್ತಿನಲ್ಲಿ ಹೆಸರು ಮಾಡಿದ ನಟಿ ಟಬು, ಆದರೂ ಅವರಿನ್ನೂ ಮದುವೆಯೇ ಆಗಿಲ್ಲ. ಈ ಬಗ್ಗೆ ಇತ್ತೀಚೆಗೆ ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಾವು ಮದುವೆಯಾಗದೇ ಇರುವುದಕ್ಕೆ ಕಾರಣ ಬಾಲಿವುಡ್‌ ನ ಸೂಪರ್‌ಸ್ಟಾರ್‌ ಅಜಯ್ ದೇವಗನ್ ಅಂತ ಹೇಳಿದ್ದಾರೆ.

ನಾನು ಚಿತ್ರೋದ್ಯಮದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಸಮೀರ್ ಮತ್ತು ಅಜಯ್ ದೇವಗನ್ ನನ್ನ ಮೇಲೆ ಸದಾ ಒಂದು ಕಣ್ಣಿಡುತ್ತಿದ್ದರು. ನನ್ನನ್ನು ಹಿಂಬಾಲಿಸುತ್ತಿದ್ದರು ಮತ್ತು ನನ್ನೊಂದಿಗೆ ಮಾತನಾಡುವಾಗ ಸಿಕ್ಕಿಬಿದ್ದ ಹುಡುಗರನ್ನು ಹೊಡೆಯುವುದಾಗಿ ಬೆದರಿಕೆ ಸಹ ಹಾಕುತ್ತಿದ್ದರು. ಅವರು ದೊಡ್ಡ ರೌಡಿಗಳಂತೆ ವರ್ತಿಸುದ್ದರು ಮತ್ತು ನಾನು ಇಂದು ಒಬ್ಬಂಟಿಯಾಗಿದ್ದೇನೆ ಎಂದರೆ ಅದಕ್ಕೆ ಅಜಯ್ ಮುಖ್ಯವಾದ ಕಾರಣ. ಅವನು ಪಶ್ಚಾತ್ತಾಪ ಪಡುತ್ತಾನೆ ಮತ್ತು ಅವನು ಮಾಡಿದ್ದಕ್ಕೆ ವಿಷಾದಿಸುತ್ತಾನೆ ಎಂದು ನಾನು ಭಾವಿಸುತ್ತೇನೆ" ಎಂದು ನಟಿ ಟಬು ಹೇಳಿದ್ದಾರೆ.

"ನಾನು ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅಜಯ್‍ನನ್ನು ಎಂದು ಹೇಳಬಹುದು. ಅವನು ಮಗುವಿನಂತೆ ಮತ್ತು ತನ್ನ ಜೊತೆಯಲ್ಲಿ ಇರುವವರನ್ನು ಸದಾ ರಕ್ಷಿಸುತ್ತಾನೆ. ಅವರು ಇರುವಾಗ ಸೆಟ್‌ನಲ್ಲಿ ವಾತಾವರಣವು ಒತ್ತಡ ರಹಿತವಾಗಿರುತ್ತದೆ. ನಾವು ಅನನ್ಯ ಸಂಬಂಧ ಮತ್ತು ಬೇಷರತ್ತಾದ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ" ಎಂದು ನಟಿ ಟಬು ಅವರು ಅಜಯ್ ದೇವಗನ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಅಜಯ್‌ ದೇವಗನ್‌ ಮತ್ತು ಟಬು ಇವರಿಬ್ಬರ ಸ್ನೇಹದ ಬಗ್ಗೆ ತುಂಬಾ ಗಾಸಿಪ್‌ಗಳು ಇದ್ದವು. ಆದರೂ ಇವರಿಬ್ಬರ ಸ್ನೇಹದ ನಡುವೆ ಅದ್ಯಾವುದೂ ಅಡ್ಡಿ ಬಂದೇ ಇಲ್ಲ. ಇಂದಿಗೂ ಇವರಿಬ್ಬರೂ ಒಳ್ಳೆಯ ಸ್ನೇಹಿತಾಗಿದ್ದಾರೆ.

Edited By : Manjunath H D
PublicNext

PublicNext

25/06/2022 06:25 pm

Cinque Terre

101.17 K

Cinque Terre

3

ಸಂಬಂಧಿತ ಸುದ್ದಿ