ಬೆಂಗಳೂರು: ಗೋವಾದ ಸಮುದ್ರತೀರದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗಿ ಕತ್ತಿಗೆ ಪೆಟ್ಟು ಮಾಡಿಕೊಂಡ ನಟ ದಿಗಂತ್ ಸೇಫ್ ಆಗಿಯೇ ಇದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೂ ದಾಖಲಾಗಿ ಈಗ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.
ದಿಗಂತ್ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದು, ದಿಗಂತ್ ಸ್ಪೋರ್ಟ್ಸ್ ಇಂಜುರಿಯಿಂದ ಬಳಲುತ್ತಿದ್ದಾರೆ.
ದಿಗಂತ್ ಅತಿ ಶೀಘ್ರದಲ್ಲಿಯೇ ಚೇತರಿಸಿಕೊಳ್ಳುವಂತೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಮುಂದಿನ ಅಪ್‌ಡೇಟ್ ಶೀಘ್ರದಲ್ಲಿ ಕೊಡೊದಾಗಿಯೂ ಹೇಳಲಾಗಿದೆ.
PublicNext
21/06/2022 10:28 pm