ಹೈದ್ರಾಬಾದ್: ಟಾಲಿವುಡ್ ನ ನಟಿ ಸಾಯಿ ಪಲ್ಲವಿ ಈಗ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಮದುವೆ ನಂತರದ ಜೀವನ ಹೇಗೆಲ್ಲ ಇರಬೇಕು ಅನ್ನೋದನ್ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸಾಯಿ ಪಲ್ಲವಿಗೆ ಈಗ 30 ವರ್ಷವೇ ಆಗಿದ್ದು, ಕೋವಿಡ್ ಸಮಯದಲ್ಲಿಯೇ ಮದುವೆ ಆಗುವಂತೆ ಒತ್ತಾಯ ಮಾಡ್ತಾನೇ ಇದ್ದರು. ನಮ್ಮ ಗ್ರಾಮದ ನನ್ನ ವಯಸ್ಸಿನ ಎಲ್ಲ ಹೆಣ್ಣುಮಕ್ಕಳೂ ಈಗ ಮದುವೆ ಆಗಿದ್ದಾರೆ. ಅದಕ್ಕೇನೆ ನಮ್ಮನೆಯವರಿಗೆ ಆತಂಕ ಹೆಚ್ಚಾಗಿದೆ ಅಂತಲೂ ಹೇಳಿದ್ದಾರೆ.
ನನ್ನ ಮದುವೆಗೆ ನನ್ನ ಮನೆಯವರು ಹುಡುಗ ಹುಡುಕಿದರೂ ಸರಿಯೇ. ನಾನೇ ಹುಡುಕಿದರೂ ಸರಿಯೆ. ಏನೂ ತೊಂದರೆ ಇಲ್ಲ. ಆದರೆ, ನನಗೆ 18ನೇ ವಯಸ್ಸಿನಲ್ಲಿ ಒಂದು ಕನಸು ಇತ್ತು. ನನಗೆ 23 ಕ್ಕೆ ಮದುವೆ ಆಗುತ್ತದೆ. 30 ವರ್ಷದ ಒಳಗೆ ಎರಡು ಮಕ್ಕಳಾಗುತ್ತವೆ ಅಂತ ಕನಸು ಕಂಡಿದೆ. ಆದರೆ, ಅದು ಆಗಲೇ ಇಲ್ಲ ಅಂತಲೇ ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
PublicNext
13/06/2022 02:53 pm