ತಿರುಪತಿ: ಬಾಲಿವುಡ್ ನಟಿ ದೀಪಿಕಾ ಪಡಕೋಣೆ ತಮ್ಮ ತಂದೆ ಪ್ರಕಾಶ್ ಪಡಕೋಣೆ ಜನ್ಮದಿನದ ಅಂಗವಾಗಿಯೇ ತಿರುಪಿತಿಗೆ ಬಂದಿದ್ದಾರೆ. ತಿರುಪತಿ ತಿಮ್ಮಪ್ಪನ ದರುಶನ ಪಡೆದು ಪುನಿತರಾಗಿದ್ದಾರೆ.ಆದರೆ, ಈ ಸಲ ಅದ್ಯಾಕೋ ಏನೋ. ಪತಿ ಮಿಸ್ಟರ್ ರಣವೀರ್ ಸಿಂಗ್ ಇಲ್ಲಿ ಕಾಣಿಸಲೇ ಇಲ್ಲ.
ಹೌದು.ಪ್ರಕಾಶ ಪಡಕೋಣೆ ಅವರಿಗೆ ಇವತ್ತು ಜನ್ಮ ದಿನ. 67 ಜನ್ಮ ದಿನದ ಅಂಗವಾಗಿಯೇ ಪುತ್ರಿ ದೀಪಿಕಾ,ಪತ್ನಿ ಉಜ್ವಲಾ,ಮತ್ತೋರ್ವ ಪುತ್ರಿ ಅನಿಶಾ ಜೊತೆಗೆ ಪ್ರಕಾಶ್ ಪಡಕೋಣೆ ಇವತ್ತೇ ತಿರುಪತಿಗೆ ಬಂದಿದ್ದರು.
ಬೆಳಗ್ಗೆ ವಿಐಪಿ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರುಶನವನ್ನೂ ಪಡೆದರು. ಆದರೆ, ದೀಪಿಕಾ ಪತಿ ರಣವೀರ್ ಸಿಂಗ್ ಈ ಸಲ ಈ ಫ್ಯಾಮಿಲಿ ಜೊತೆಗೆ ಕಾಣಿಸಿಕೊಳ್ಳಲ್ಲಿಲ್ಲ. ಮದುವೆ ಆದ ಬಳಿಕ ಒಟ್ಟಿಗೇನೆ ದೀಪಿಕಾ ಮತ್ತು ರಣವೀರ್ ಸಿಂಗ್ ತಿಮ್ಮಪ್ಪನ ದರುಶ ಪಡೆದಿದ್ದರು.
PublicNext
10/06/2022 07:43 pm