ಮುಂಬೈ:ಬಾಲಿವುಡ್ ಯಾವಾಗಲೂ ಬಾಲಿವುಡ್ಡೇ. ಇದನ್ನ ಮೀರಿಸೋಕೆ ಆಗೋದಿಲ್ಲ. ನಾನು ದಕ್ಷಿಣದ ಕಡೆಯಿಂದಲೇ ಬಂದಿದ್ದೇನೆ. ಆದರೆ, ನನ್ನ ಕರ್ಮಭೂಮಿ ಬಾಲಿವುಡ್. ಅದಕ್ಕೇನೆ ನಾನು ಮುಂಬೈಕರ್ ಅಂತಲೇ ಬಾಲಿವುಡ್‌ನ ಒಂದು ಕಾಲದ ನಾಯಕ ಸುನಿಲ್ ಶೆಟ್ಟಿ ಈಗ ಹೇಳಿಕೊಂಡಿದ್ದಾರೆ.
ಬಾಲಿವುಡ್ ವರ್ಸಸ್ ಸೌಥ್ ಸಿನಿಮಾ ದಂಗಲ್ ಶುರು ಆಗಿ ಬಿಟ್ಟಿದೆ.ಬಾಲಿವುಡ್‌ಗಿಂತಲೂ ದಕ್ಷಿಣದಲ್ಲಿ ಒಳ್ಳೆ ಸಿನಿಮಾ ಬರ್ತಾಯಿವೆ. ಇದರ ಬಗ್ಗೆ ಕೇಳಿದ ಪ್ರಶ್ನೆಗೇನೆ, ನಟ ಸುನಿಲ್ ಶೆಟ್ಟಿ ಬಾಲಿವುಡ್ ಎಂದೂ ಬದಲಾಗುದಿಲ್ಲ. ಬಾಲಿವುಡ್ ಗ್ರೇಟ್ ಅಂತಲೇ ಹೆಮ್ಮೆಪಟ್ಟಿದ್ದಾರೆ.
ಬಾಲಿವುಡ್ ಜನರಿಗೆ ಬೇಕಾಗೋ ಸಿನಿಮಾ ಮಾಡ್ತಿಲ್ಲ. ದಕ್ಷಿಣ ಆ ಕೆಲಸ ಮಾಡ್ತಿದೆ ಅನ್ನೋದನ್ನ ಪರೋಕ್ಷವಾಗಿಯೇ ಸುನಿಲ್ ಶೆಟ್ಟಿ ಹೇಳಿಕೊಂಡಿದ್ದಾರೆ. ಆದರೆ,ಇದೇ ಸುನಿಲ್ ಶೆಟ್ಟಿಯ ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ರನ್ನ ಹೊಗಳಿ ತಾವೇ ಹೆಮ್ಮೆ ಪಟ್ಟಿದ್ದಾರೆ. ಈಗ ವೈರಲ್ ಆಗ್ತಿರೋ ವೀಡಿಯೋ ಸುನಿಲ್ ಶೆಟ್ಟಿಯ ಈ ಎರಡು ರೀತಿಯ ರಿಯಾಕ್ಷನ್ ಅನ್ನ ತೋರಿಸಿದ್ದು ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
PublicNext
10/06/2022 05:32 pm