ಬೆಂಗಳೂರು: ಕನ್ನಡದ ಕಿಚ್ಚ ಸುದೀಪ್ ಹೊಸಬರಿಗೆ ಸಪೋರ್ಟ್ ಮಾಡ್ತಾನೇ ಇರ್ತಾರೆ. ಹಳಬರು ಬಂದ್ರೂ ಅಷ್ಟೆ. ಅವರ ಚಿತ್ರದ ಟ್ರೈಲರ್ ರಿಲೀಸ್ ಮಾಡಿಕೊಡ್ತಾರೆ. ಅದರಂತೆ ನಿರ್ದೇಶಕ ಚೈತನ್ಯ ನಿರ್ದೇಶನದ ಅಬ್ಬಬ್ಬ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಮೆಚ್ಚುಗೆ ಮಾತುಗಳನ್ನೂ ಆಡಿದ್ದಾರೆ.
ಹೊಸಬರೇ ಇರೋ ಈ ಚಿತ್ರದ ಕಂಟೆಂಟ್ ಅನ್ನ ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ. ಹೊಸಬರ ಅಭಿನಯ ಪಕ್ವವಾಗಿಯೇ ಇದೆ ಅಂತಲೂ ಕೊಂಡಾಡಿದ್ದಾರೆ.
ಜುಲೈ-1 ರಂದು ಅಬ್ಬಬ್ಬ ಚಿತ್ರ ರಿಲೀಸ್ ಆಗುತ್ತಿದೆ. ನೋಡಿ ಹರೆಸಿ ಹಾರೈಸಿ ಅಂತಲೂ ಚಿತ್ರ ತಂಡದ ಪರವಾಗಿಯೇ ಸುದೀಪ್ ಈಗ ಕೇಳಿಕೊಂಡಿದ್ದಾರೆ.
PublicNext
09/06/2022 07:11 pm