ಮುಂಬೈ: ಕಿರುತೆರೆ ನಟಿ ಕಮ್ ಮಾಡೆಲ್ ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್‌ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಈಗಾಗಲೇ ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಸದ್ಯ ಉರ್ಫಿ ಜಾವೇದ್ ಗೋಣಿಚೀಲದಿಂದ ತಮ್ಮ ಮಾನ ಮುಚ್ಚಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಟಿಯ ಈ ಲುಕ್ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿಯ ಹಾಟ್ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದು, ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
06/06/2022 06:24 pm