ಬೆಂಗಳೂರು: ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡು ಸಖತ್ ಫೇಮಸ್ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ಸೆಟ್ ಕೂಡ ಮಾಡಿದೆ. ರಾರಾ ರಕ್ಕಮ್ಮ ಹಾಡಿಗೆ ಸಾಮಾನ್ಯ ಜನರಷ್ಟೇ ಅಲ್ಲ ಹೆಜ್ಜೆ ಹಾಕಿಲ್ಲ. ಈಗ ಸ್ಯಾಂಡಲ್‌ವುಡ್ ತಾರೆಯರು ಕುಣಿದು ಕುಪ್ಪಳಿಸಿದ್ದಾರೆ.
ಸದ್ಯಕ್ಕೆ ರಕ್ಕಮ್ಮ ಹಾಡಿನ ಫೀವರ್ ಜೋರಾಗಿದ್ದು ಸ್ಯಾಂಡಲ್‌ವುಡ್‌ನ ಹಲವಾರು ಸೆಲೆಬ್ರಿಟಿಗಳು ಹಾಡಿಗೆ ಕುಣಿದು ಖುಷಿಪಟ್ಟಿದ್ದಾರೆ. ರಕ್ಕಮ್ಮನ ಈ ವೀಡಿಯೋ ವೈರಲ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.ವಿಕ್ರಾಂತ ರೋಣ ಚಿತ್ರದ ಕಿಚ್ಚ ಸುದೀಪ್ ಮತ್ತು ಜಾಕ್ಲಿನ್ ನಟನೆಯ ಈ ರಾರಾ ರಕ್ಕಮ್ಮ ಹಾಡು ರಿಲೀಸ್ ಆಗಿ ಈಗಾಗಲೇ ಮಿಲಿಯನ್ ಗಟ್ಟಲೆ ವೀವ್ಸ್ ಪಡೆಯುತ್ತಿದೆ.
ಬರೀ ಸೆಲೆಬ್ರಿಟಿಗಳು ಮಾತ್ರ ಅಲ್ಲ ಯುವಕರು ಕೂಡ ಈ ಹಾಡಿಗೆ ಫಿದಾ ಆಗಿ ಸ್ಟೆಪ್ ಹಾಕಿರೋ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
31/05/2022 12:22 pm