ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಬರೀಶ್ ನಯಾ ಅವತಾರ್. ಜನ್ಮ ದಿನದಂತು ಹೊರಬಿತ್ತು ಬ್ಯಾಡ್ ಮ್ಯಾನರ್ಸ್ ಚಿತ್ರದ ಅಭಿಷೇಕ್ ಪೊಲೀಸ್ ಲುಕ್.
ಅಭಿಷೇಕ್ ಅಂಬರೀಶ್ ಜನ್ಮ ದಿನ ಇವತ್ತು. ಈ ದಿನವೇ ಡೈರೆಕ್ಟರ್ ಸೂರಿ ತಮ್ಮ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ.ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಪಾತ್ರ ಏನು ಅನ್ನೋ ಕುತೂಹಲ ಇತ್ತು. ಆದರೆ, ಈಗ ಟೀಸರ್ ಮೂಲಕ ಅದು ರಿವೀಲ್ ಆಗಿದೆ.ರಗಢ್ ಪೊಲೀಸ್ ಆಫೀಸರ್ ಪಾತ್ರದಲ್ಲಿಯೇ ಅಭಿಷೇಕ್ ಈ ಚಿತ್ರದಲ್ಲಿ ಕಂಗೊಳಿಸುತ್ತಿದ್ದಾರೆ. ಚಿತ್ರದ ಪ್ರತಿ ಫ್ರೇಮ್ ಅಲ್ಲೂ ಅಭಿಷೇಕ್ ತಂದೆ ಅಂಬರೀಶ್ ಮ್ಯಾನರಿಸಂ ಟ್ರೈ ಮಾಡಿದಂತಿದೆ. ಉಳಿದಂತೆ ಅಭಿ,ಬ್ಯಾಡ್ ಮ್ಯಾನರ್ಸ್ ಮೂಲಕ ಪೊಲೀಸ್ ಆಗಿ ಸರ್ಪ್ರೈಜ್ ಕೊಟ್ಟಿದ್ದಾರೆ.
PublicNext
03/10/2021 10:22 am