ಮುಂಬೈ: ನಾನು ಸ್ವಚ್ಛಂದ ಬಾಲ್ಯ ಕಳೆದಿದ್ದೇನೆ. ಬಾಲಿವುಡ್ ಸ್ಟಾರ್ ದಂಪತಿಯ ಮಗಳಾಗಿದ್ದರೂ ಆಟೋ ರಿಕ್ಷಾದಲ್ಲೇ ಶಾಲೆಗೆ ಹೋಗಿತ್ತಿದ್ದೆ ಎಂದು ನಟಿ ಹೇಮಾಮಾಲಿನಿ ಹಾಗೂ ನಟ ಧರ್ಮೇಂದ್ರ ದಂಪತಿಯ ಪುತ್ರಿ ಇಶಾ ಡಿಯೋಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು , ಸ್ಟಾರ್ ಜೋಡಿಯ ಮಗಳಾದರೂ ನನ್ನ ಶಾಲಾ ದಿನಗಳನ್ನು ಇತರ ಮಕ್ಕಳಂತೆಯೇ ಕಳೆದಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಹಾಗೂ ಸಹಪಾಠಿಗಳು ನನ್ನೊಂದಿಗೆ ಆತ್ಮೀಯತೆಯಿಂದ ಇರುತ್ತಿದ್ದರು. ಬಾಲ್ಯದಲ್ಲಿ ನನ್ನ ಪೋಷಕರು ನನಗೆ ಸರಳತೆ ಕಲಿಸಿಕೊಟ್ಟಿದ್ದಾರೆ ಎಂದು ಇಶಾ ಡಿಯೋಲ್ ಹೇಳಿದ್ದಾರೆ.
PublicNext
21/09/2021 08:47 pm