ಮುಂಬೈ: ತೇರಿ ಮೇರಿ..ಎಂಬ ಈ ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಒಂದೇ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಗಾಯಕಿ ರಾನು ಮಂಡಲ್ ನಿಮಗೆಲ್ಲ ಪರಿಚಿತರಾಗಿದ್ದಾರೆ. ಈಗ ಅವರ ಜೀವನಗಾಥೆ ಬಗ್ಗೆ ಬಾಲಿವುಡ್‌ನಲ್ಲಿ ಸಚಿತ್ರವೊಂದು ತಯಾರಾಗುತ್ತಿದೆ.
ರಾನು ಮಂಡಲ್ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ.. ಹಾಡನ್ನು ರೈಲು ನಿಲ್ದಾಣದಲ್ಲಿ ಹಾಡಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದು ಕೆಲವೇ ದಿನಗಳಲ್ಲಿ ಎಲ್ಲಡೆ ವೈರಲ್ ಆಗಿತ್ತು. ಅನೇಕರು ರಾನು ಗಾಯನವನ್ನು ಕೊಂಡಾಡಿದ್ದರು. ರಾನು ರಾತ್ರಿ ಬೆಳಗಾಗುವುದರೊಳಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆದರು. ಈಗ ಅವರ ಜೀವ ಕಥೆಯಾಧರಿತ ಸಿನಿಮಾವೊಂದು ತೆರೆ ಮೇಲೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಿಶಿಕೇಶ್ ಮಂಡಲ್ ಅವರು ಈ ಬಯೋಪಿಕ್ ನಿರ್ದೇಶನ ಮಾಡುತ್ತಿದ್ದಾರೆ. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
PublicNext
05/09/2021 08:08 am