ಆನೆಗುಡ್ಡೆ: ಖ್ಯಾತ ನಿರ್ದೇಶಕ , ನಟ ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಿತ್ರದ ಮುಹೂರ್ತ ಉಡುಪಿ ಜಿಲ್ಲೆಯ ಶ್ರೀ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ರಿಷಬ್ ಹುಟ್ಟೂರಿನಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಆಗಮಿಸಿ ಶುಭ ಕೋರಿದರು. ಕಾಂತಾರ ಸಿನಿಮಾ ಕರಾವಳಿ ಜನಪದ ಕ್ರೀಡೆ ಕಂಬಳ ಕುರಿತಾದ ಕಥಾವಸ್ತು ಹೊಂದಿರಲಿದೆ ಎನ್ನಲಾಗಿದ್ದು, ಸಿನಿಮಾದ ಪೋಸ್ಟರ್ ಗಮನ ಸೆಳೆದಿತ್ತು. ಸದ್ಯ ಮುಹೂರ್ತ ಪೂರೈಸಿರುವ ಕಾಂತಾರ ಚಿತ್ರತಂಡ, ಚಿತ್ರದ ಬಹುಪಾಲು ಚಿತ್ರೀಕರಣ ಕರಾವಳಿ ಭಾಗದಲ್ಲಿ ನಡೆಸಲಿದೆ.
PublicNext
27/08/2021 08:11 pm