ಬೆಂಗಳೂರು: ಪಕ್ಕಾ ಹಳ್ಳಿ ಹುಡುಗ ಮಂಜು ಪಾವಗಡ, ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಹೊರಬಂದಿದ್ದಾರೆ. ವಿಜೇತರಾದ ಅವರಿಗೆ 53 ಲಕ್ಷ ಹಣ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಇಷ್ಟೊಂದು ಹಣ ನನ್ನ ಜೀವನದಲ್ಲೇ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಸೀಸನ್ 8ರ ವಿನ್ನರ್ ಆಗಿ ಹೊರಬಂದ ಅವರು ಈ ಹಣದಲ್ಲಿ ನಾನು ನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಇದುವರೆಗೆ ನೋಡಿರಲಿಲ್ಲ, ಬರೀ ಕೇಳಿದ್ದೆ ಎಂದ ಮಂಜು ಪುಳಕಗೊಂಡಿದ್ದಾರೆ.
ಈ ಹಣದಿಂದ ಮುಂದೆ ಏನು ಮಾಡಬೇಕು ಎಂದು ಈಗಲೇ ಏನೂ ಪ್ಲ್ಯಾನ್ ಇಲ್ಲ. ಪೋಷಕರು ನನಗಾಗಿ ಕಷ್ಟ ಪಟ್ಟು ದುಡಿದಿದ್ದಾರೆ. ನನಗೆ ಅವರ ಖುಷಿಗಿಂತ ಯಾವುದೂ ಮುಖ್ಯವಲ್ಲ. ಹೀಗಾಗಿ ಅವರ ಬಯಕೆಗಳನ್ನು ಈಡೇರಿಸುವುದೇ ನನ್ನ ಮುಂದಿನ ಗುರಿ ಎಂದು ಮಂಜು ಹೇಳಿದ್ದಾರೆ.
PublicNext
09/08/2021 11:03 am