ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಜು ಪಾವಗಡಗೆ ಒಲಿದ ಬಿಗ್‌ ಬಾಸ್ ವಿನ್ನರ್ ಪಟ್ಟ- ಕೆಪಿ ಅರವಿಂದ್ ರನ್ನರ್‌ಅಪ್

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್-8ರ ವಿಜೇತರಾಗಿ ಮಂಜು ಪಾವಗಡ ಹೊರಹೊಮ್ಮಿದ್ದು, ಕೆ.ಪಿ. ಅರವಿಂದ್ ರನ್ನರ್‌ಅಪ್ ಆಗಿದ್ದಾರೆ.

ಬಿಗ್​ಬಾಸ್ ಸೀಸನ್ 8ರ ಗ್ರ್ಯಾಂಡ್​ ಫಿನಾಲೆಯಲ್ಲಿ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಮಂಜು ಪಾವಗಡ ಅವರನ್ನು ವಿನ್ನರ್ ಎಂದು ಘೋಷಿಸಿದರು. ಹೀಗಾಗಿ ಅರವಿಂದ್ ರನ್ನರ್‌ಅಪ್ ಆಗಿದ್ದಾರೆ. ಇದಕ್ಕೂ ಮುನ್ನ ದಿವ್ಯ ಉರುಡುಗ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದರು.

ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿ ಸ್ಪರ್ಧಿಗಳನ್ನು ಹಾಗೂ ವೀಕ್ಷಕರನ್ನು ರಂಜಿಸಿಕೊಂಡೇ ಬಂದಿದ್ದರು. ಒಂದು ಹಂತದಲ್ಲಿ ದಿವ್ಯಾ ಸುರೇಶ್ ಜತೆ ಸೇರಿ ಆಟದಲ್ಲಿ ಮೋಸ ಮಾಡಿದ್ದಾರೆ ಎನ್ನುವುದನ್ನು ಬಿಟ್ಟರೆ ಮಂಜು ಪಾವಗಡ ಮೇಲೆ ಬೇರೆ ಯಾವ ಆರೋಪಗಳಿಲ್ಲ.

ದಿವ್ಯಾ ಉರುಡುಗ ಅವರು ಶನಿವಾರ ನಡೆದ ಎಲಿಮಿನೇಷನ್​ನಲ್ಲಿ ತಾವೇ ಹೊರಬರುವ ಸ್ಪರ್ಧಿ ಎಂದು ಹೇಳಿಕೊಂಡಿದ್ದರು. ಆದರೆ ವೈಷ್ಣವಿ ಹೊರ ಬರುವ ಮೂಲಕ ಅಚ್ಚರಿಯ ಫಲಿತಾಂಶ ಹೊರ ಬಿದ್ದಿತ್ತು. ಇಂದು ದಿವ್ಯಾ ಉರುಡುಗ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸ್ಪರ್ಧೆಯಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಮಾತ್ರ ಉಳಿದುಕೊಂಡಿದ್ದರು.

ಸದ್ಯದ ಫಲಿತಾಂಶದಿಂದ ಮಂಜು ಪಾವಗಡ ಅವರು ವಿನ್ನರ್ ಆಗಿದ್ದು, ಗೆಲುವಿನ ಸಂಭ್ರಮದಲ್ಲಿದ್ದಾರೆ. ಇನ್ನು ಅರವಿಂದ್ ರನ್ನರ್‌ಅಪ್ ಆಗಿ 2ನೇ ಸ್ಥಾನ ಪಡೆದುಕೊಂಡಿದ್ದರೆ, ದಿವ್ಯಾ ಉರುಡುಗ ಟಾಪ್​ 3 ಸ್ಥಾನದಲ್ಲಿದ್ದಾರೆ. ಉಳಿದಂತೆ ನಿನ್ನೆ ಎಲಿಮಿನೇಟ್ ಆಗಿದ್ದ ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಟಾಪ್​ ಅವರು ಕ್ರಮವಾಗಿ 4 ಮತ್ತು 5 ಸ್ಥಾನದಲ್ಲಿದ್ದಾರೆ.

Edited By : Vijay Kumar
PublicNext

PublicNext

08/08/2021 11:14 pm

Cinque Terre

126.97 K

Cinque Terre

19