ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಲಾವಿದರು ಕರೋನಾದಿಂದ ಕೆಲಸವಿಲ್ಲದೆ ಇಷ್ಟು ದಿನ ಮಕಾಡೆ ಮಲಗಿದ್ರು.ಎಷ್ಟೋ ಜನ ಕಲಾವಿದರು ಕೆಲಸ ಸಿಗದೆ ಒಪ್ಪತ್ತಿನ ಊಟಕ್ಕೂ ಒದ್ದಾಡಿದೊಂಟು, ಆದರೆ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ನಾಗೇಶ್ ಯು ಎಸ್ , ಗಣಿ ಬಿ ಕಾಂ ಹಾಗೂ ಸೆಕೆಂಡ್ ಆಫ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ, ಕರೋನದಲ್ಲಿಯೂ ಕೆಲವೊಂದಿಷ್ಟು ಕಲಾವಿದರಿಗೆ ಆಸರೆಯಾದ ಸ್ಯಾಂಡಲ್ ವುಡ್ ನ ನಿರ್ಮಾಪಕ ಎನ್ನುವ ಹೆಗ್ಗಳಿಕೆ ಇವರಿಗಿದೆ. ಇದೀಗಾ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಮಾಡಿ ಹೊಸದೊಂದು ಪ್ರಾಜೆಕ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಗಜಾನನ ಅಂಡ್ ಗ್ಯಾಂಗ್ ಸಿನಿಮಾದ ಟೈಟಲ್ಲೇ ಜನರನ್ನ ತನ್ನತ್ತ ಆಕರ್ಷಣೆ ಮಾಡುತ್ತಿದೆ, ಸಿನಿಮದಲ್ಲಿ ಪ್ರಮುಖ ಪಾತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಶ್ರೀ ಮಾದೇವನ್ ಬಣ್ಣ ಹಚ್ಚಿದ್ದು, ಅಭಿಷೆಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಗಣಿ ಬಿಕಾಂ ಸಿನಿಮಾದ ನಟ-ನಿರ್ದೇಶಕ ಅಭಿಷೇಕ್ ಶೆಟ್ಟಿಯ ಎರಡನೇ ಸಿನಿಮಾ ಇದಾಗಿದ್ದು ಹೊಸದೊಂದು ಪ್ರಯತ್ನಕ್ಕೆ ಶೆಟ್ರು ಕೈ ಹಾಕಿದ್ದಾರೆ.
ಇಂದು ಗಜಾನನ ಅಂಡ್ ಗ್ಯಾಂಗ್ ಸಿನಿಮಾದ ಬಹುನಿರೀಕ್ಷಿತ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು ಪಡ್ಡೆ ಹುಡುಗರನ್ನ ಹುಚ್ಚೆಬ್ಬಿಸಿದೆ, ಲವ್ ಡೇ ಐ ಡೋಂಟ್ ಲೈಕ್ ದಿಸ್ ಲವ್ ಡೇ ಎನ್ನುವ ಅದ್ಭುತವಾದ ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.ಇದೀಗ ಸಿನಿಮಾ ತಂಡ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
PublicNext
10/02/2021 07:11 pm