ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಓಟಿಟಿಯಲ್ಲೂ ಮೊದಲ ವಾರವೇ ಶುರು ಆಗಿದೆ ಹೊಸ ಲವ್ ಸ್ಟೋರಿ !

ವೀಡಿಯೋ ಕೃಪೆ voot

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಕಾಮನ್. ಇದು ಟಿಆರ್‌ಪಿ ಗಿಮಿಕ್ ಅನ್ನೋರು ಇದ್ದಾರೆ. ಆದರೆ, ಬಿಗ್ ಬಾಸ್ ಓಟಿಟಿಯಲ್ಲೂ ಇದೇನಾ ? ಅನ್ನೋ ಅನುಮಾನದ ನಡುವೆ ಈಗ ಇಲ್ಲೊಂದು ಲವ್ ಸ್ಟೋರಿ ಶುರು ಆಗಿದೆ. ಲವ್ ಸ್ಟೋರಿಗೆ ಹೀರೋ ರಾಕೇಶ್ ಅಡಿಗ ಆದ್ರೆ, ಹೀರೋಯಿನ್ ಸ್ಪೂರ್ತಿ ಗೌಡ ಅನ್ನೋ ಕಥೆ ಓಟಿಟಿಯ ಮೊದಲ ವಾರದಲ್ಲಿಯೇ ಶುರು ಆಗಿ ಬಿಟ್ಟಿದೆ.

ಹೌದು. ಬಿಗ್ ಬಾಸ್ ಮನೆಯಲ್ಲಿ ನಟ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಲವ್ ಶುರು ಆದಂತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಗೌಡ, ರಾಕೇಶ್ ಅಡಿಗ ಕೈ ಹಿಡಿದು ಭವಿಷ್ಯ ಹೇಳ್ತಿದ್ದಾರೆ.ನಿಮ್ಮ ಕೈಗೆ ಹಣ ಬರುತ್ತದೆ. ಆದರೆ, ಅದು ಅರ್ಧಂಬರ್ಧದ ಅಂತಲೇ ಹೇಳ್ತಾರೆ.

ಆದರೆ, ರಾಕೇಶ್ ಅಡಿಗ ಕೂಡ ಸ್ಪೂರ್ತಿ ಕೈ ಹಿಡಿದು ಬಿಗ್ ಬಾಸ್ ಮನೆಯಲ್ಲಿ ನಿಮಗೆ ಲವ್ ಆಗುತ್ತದೆ. ಲವ್ ಮಾಡೋ ಹುಡುಗ ನಿಮ್ಮ ಕೈ ಹಿಡಿದು ಭವಿಷ್ಯ ನುಡಿಯುತ್ತಾನೇ ಅಂತಲೇ ರಾಕೇಶ್ ಅಡಿಗ ಹೇಳುತ್ತಾರೆ. ಆದರೆ, ರಾಕೇಶ್ ಅಡಿಗ ಮಾಡಿರೋ ಫ್ಲರ್ಟ್ ಗೆ ಸ್ಪೂರ್ತಿ ನಕ್ಕು ಅಲ್ಲಿಂದ ಹೊರಟು ಹೋಗ್ತಾರೆ. ಅಲ್ಲಿಗೆ ಇಲ್ಲೂ ಒಂದು ಲವ್ ಸ್ಟೋರಿ ಶುರುವಾದಂತೆ ಕಾಣುತ್ತಿದೆ.

Edited By :
PublicNext

PublicNext

08/08/2022 09:21 pm

Cinque Terre

65.35 K

Cinque Terre

5

ಸಂಬಂಧಿತ ಸುದ್ದಿ