ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಳ ಉಡುಪಿನ ಬಗ್ಗೆ ಕಾಮೆಂಟ್ ಮಾಡಿ ಸುದ್ದಿಯಾದ ನಟಿ ಕಸ್ತೂರಿ

ಎಂಬತ್ತರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಗ್ಲಾಮರಸ್ ನಟಿ ಕಸ್ತೂರಿ ಅವರಿಗೆ ಈಗಲೂ ಮುಂಚೆಯಂತೆಯೇ ಬೇಡಿಕೆ ಹಾಗೆಯೇ ಇದೆ. ಸದ್ಯ ಅವರು ಹತ್ತಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಗಾಗ ಹಲವಾರು ಕಾರಣಗಳಿಗೆ ಅವರು ಸುದ್ದಿಯಾಗುತ್ತಿದ್ದರು. ಭಾರತೀಯ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದಾಗಿದೆ. ಇಂತಹ ನಟಿ ಇದೀಗ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರ ಒಳ ಉಡುಪಿನ ಬಗ್ಗೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.

ಟೀಮ್ ಇಂಡಿಯಾ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ಇದೀಗ ಒಳ ಉಡುಪೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಸ್ತೂರಿ, ಅದಕ್ಕಷ್ಟು ಚಂದದ ಸಾಲುಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರ ಚಿಪ್ಸ್, ಕೂಲ್ ಡ್ರಿಂಕ್ಸ್, ಆನ್ ಲೈನ್ ಗೇಮ್ ರೀತಿಯ ಜಾಹೀರಾತಿನಲ್ಲಿ ನಟಿಸಿದ್ದನ್ನು ನೋಡಿದ್ದೆ. ರಾಹುಲ್ ಅವರಿಗಿಂತ ಭಿನ್ನ ಹಾದಿ ಹಿಡಿದಿದ್ದಾರೆ. ಅವರು ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಲುಕ್ ಚೆನ್ನಾಗಿದೆ. ಕಪಾಟಿನಲ್ಲಿರುವ ಹುಡುಗರ ಒಳ ಉಡುಪುಗಳು ಈಗ ಹೊರ ಬರುವ ಭರವಸೆ ಮೂಡಿಸಿದ್ದಾರೆ’ ಎಂದು ಬರೆದಿದ್ದಾರೆ. ಪುರುಷರ ಉಡುಪಿನ ಬಗ್ಗೆ ಅವರು ಮಾಡಿರುವ ಕಾಮೆಂಟ್ ಬಗ್ಗೆ ಮಜಮಜವಾಗಿ ಚರ್ಚೆಯಾಗುತ್ತಿದೆ.

Edited By : Nagaraj Tulugeri
PublicNext

PublicNext

31/05/2022 03:23 pm

Cinque Terre

45.11 K

Cinque Terre

2