ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ.​23ಕ್ಕೆ ‘ಅವತಾರ್​’ ರಿ-ರಿಲೀಸ್, 2 ವಾರ ಮಾತ್ರ ಪ್ರದರ್ಶನ; ಪ್ರೇಕ್ಷಕರಿಗೆ 4k ರೆಸಲ್ಯೂಷನ್ ಅನುಭವ

ಸೆಪ್ಟೆಂಬರ್​ 23ರಂದು ‘ಅವತಾರ್​’ ರಿ-ರಿಲೀಸ್​ ಆಗುತ್ತದೆ. ಆದರೆ ಒಂದು ಷರತ್ತು ಕೂಡ ಇದೆ. ಈ ಬಾರಿ ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು ಕೇವಲ 2 ವಾರ ಮಾತ್ರ ಎಂದು ಹೇಳಲಾಗಿದೆ. ಇದನ್ನು ತಿಳಿಸುವ ಸಲುವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ಗಳನ್ನು ಹಂಚಿಕೊಂಡಿದೆ ಚಿತ್ರತಂಡ. ಅಲ್ಲದೇ, ರೀ-ರಿಲೀಸ್​ ಪ್ರಯುಕ್ತ ಹೊಸ ಟ್ರೇಲರ್​ ಕೂಡ ಬಿಡುಗಡೆ ಮಾಡಲಾಗಿದೆ.

2009ರಲ್ಲಿ ಬಂದ ‘ಅವತಾರ್​’ (Avatar) ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಿತ್ತು. ಪ್ರತಿ ಬಾರಿ ಮರು ಬಿಡುಗಡೆ ಆದಾಗಲೂ ಈ ಹಾಲಿವುಡ್​ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದ ಉದಾಹರಣೆ ಇದೆ. ಈಗ ಮತ್ತೊಮ್ಮೆ ಚಿತ್ರವನ್ನು ಥಿಯೇಟರ್​ನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ.

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ‘ಅವತಾರ್​’ ಸಿನಿಮಾದ ಪ್ರತಿ ದೃಶ್ಯ ಕೂಡ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಈಗ ಇನ್ನೊಮ್ಮೆ ಚಿತ್ರಮಂದಿರದಲ್ಲಿ ಈ ಸಿನಿಮಾ ರಾರಾಜಿಸಲಿದೆ. ಜಗತ್ತಿನಾದ್ಯಂತ ಇರುವ ಸಿನಿಪ್ರಿಯರು ಸೆಪ್ಟೆಂಬರ್​ 23ಕ್ಕಾಗಿ ಕಾಯುತ್ತಿದ್ದಾರೆ.

ಅಷ್ಟಕ್ಕೂ ಈಗ ಈ ಸಿನಿಮಾ ರಿ-ರಿಲೀಸ್ ಯಾಕೆ? ಅದಕ್ಕೂ ಮುಖ್ಯ ಕಾರಣ. ‘ಅವತಾರ್​’ ಸಿನಿಮಾದ ಮುಂದುವರಿದ ಕಥೆ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಸಿನಿಪ್ರಿಯರ ಆಸೆ. ಅದಕ್ಕಾಗಿ ಈ ಚಿತ್ರದ ಸೀಕ್ವೆಲ್​ ಬರಬೇಕು ಎಂದು ಎಲ್ಲರೂ ಬಯಸುತ್ತಿದ್ದರು. ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಈ ಚಿತ್ರದ ಎರಡನೇ ಪಾರ್ಟ್​ ಸಿದ್ಧ ಪಡಿಸುತ್ತಿದ್ದಾರೆ. ಅದಕ್ಕೆ ‘ಅವತಾರ್​: ದಿ ವೇ ಆಫ್​ ವಾಟರ್​’ ಎಂದು ಹೆಸರು ಇಡಲಾಗಿದೆ. ಈ ವರ್ಷವೇ ಆ ಚಿತ್ರ ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಜನರನ್ನು ಮತ್ತೆ ಅವತಾರ್​ ಲೋಕಕ್ಕೆ ಕೊಂಡೊಯ್ಯಲು ಮೊದಲ ಪಾರ್ಟ್​​ ಅನ್ನು ರೀ-ರಿಲೀಸ್​ ಮಾಡಲಾಗುತ್ತಿದೆ.

‘ಅವತಾರ್​’ ಸಿನಿಮಾಗೆ ಈಗ ಒಂದಷ್ಟು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 4ಕೆ ರೆಸಲ್ಯೂಷನ್​ನಲ್ಲಿ ಸಿನಿಮಾ ಬಿತ್ತರ ಆಗಲಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಬರೋಬ್ಬರಿ 13 ವರ್ಷಗಳ ಹಿಂದಿನ ಈ ಸಿನಿಮಾವನ್ನು ಈ ಕಾಲದ ತಂತ್ರಜ್ಞಾನಕ್ಕೆ ಅಪ್​ಗ್ರೇಡ್​ ಮಾಡಲು ಪ್ರಯತ್ನಿಸಲಾಗಿದೆ. ಈ ಸಿನಿಮಾದ ಗ್ರಾಫಿಕ್ಸ್​ ದೃಶ್ಯಗಳನ್ನು ನೋಡುವುದೇ ಒಂದು ಅದ್ಭುತ ಅನುಭವ.

Edited By : Abhishek Kamoji
PublicNext

PublicNext

24/08/2022 12:42 pm

Cinque Terre

45.3 K

Cinque Terre

0