ಬಾಲಿವುಡ್ ಅಂದ್ರೆ ಬಹುಭಾಷೆಯ ನಟ-ನಟಿಯರ ಸಂಗಮ. ಅದರಲ್ಲೂ ಬಾಲಿವುಡ್ ಗೆ ಕೇರಳ ರಾಜ್ಯ ಅನೇಕ ಅಗಾಧ ಪ್ರತಿಭೆಗಳನ್ನು ನೀಡಿದೆ. ಕೇರಳದಲ್ಲಿ ಹುಟ್ಟಿದ್ದರೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅನೇಕ ಕಲಾವಿದರಿದ್ದಾರೆ. ಅದರಲ್ಲಿ ಮುಂಚೂಣಿ ನಟ ನಟಿಯರ ಲಿಸ್ಟ್ ನಿಮಗಾಗಿ ಇಲ್ಲಿದೆ.
ಮಾಳವಿಕಾ ಮೋಹನನ್
ಫ್ಯಾಷನಿಸ್ಟ್ ಹಾಗೂ ಖ್ಯಾತ ಸಿನಿಮಾಟೋಗ್ರಾಫರ್ ಕೆ.ಯು. ಮೋಹನನ್ ಅವರ ಪುತ್ರಿ ಮಾಳವಿಕಾ ಮೋಹನನ್ ಕೂಡ ಮಲಯಾಳಿ ಬೆಡಗಿ. ತಮಿಳು ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದರೂ ಮಜೀದ್ ಮಜಿದಿ ನಿರ್ದೇಶನದ 'ಬಿಯಾಂಡ್ ದ ಕ್ಲೌಡ್ಸ್' ಸಿನಿಮಾದಲ್ಲಿ ಅಭಿನಯಿಸಿರುವುದು ಹೆಮ್ಮೆಯ ವಿಚಾರ
ವಿದ್ಯಾ ಬಾಲನ್
ಬಾಲಿವುಡ್‌ನ ಹೆಸರಾಂತ ನಟಿ ವಿದ್ಯಾ ಬಾಲನ್‌ರ ಮೂಲ ಕೇರಳ. ಮಲಯಾಳಂ ಸಿನಿಮಾದ ಮೂಲಕ ತಮ್ಮ ಸಿನಿ ಕರಿಯರ್ ಪ್ರಾರಂಭಿಸಿದರೂ ಬಾಲಿವುಡ್‌ನಲ್ಲಿ ಅದೃಷ್ಟ ಕೈ ಹಿಡಿದಿದ್ದರಿಂದ ಬಿ ಟೌನ್‌ಗೆ ಹಾರಿದರು. ಸದ್ಯ ಭಾರತೀಯ ಸಿನಿಮಾ ರಂಗದ ಪ್ರತಿಭಾವಂತ ನಟಿ ಎನಿಸಿಕೊಂಡಿದ್ದಾರೆ ವಿದ್ಯಾ.
ಕೀರ್ತಿ ಸುರೇಶ್
ರಾಷ್ಟ್ರ ಪ್ರಶಸ್ತಿ ವಿಜೇತೆ, ಮಲಯಾಳಿ ಬೆಡಗಿ ಕೀರ್ತಿ ಸುರೇಶ್ ಪ್ರಾರಂಭದಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರೂ ಅವರು ಹೆಚ್ಚು ಹೆಸರು ಮಾಡಿದ್ದು ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ.
ನಯನತಾರಾ
ಲೇಡಿ ಸೂಪರ್ ಸ್ಟಾರ್ ಎಂದೇ ಪ್ರಸಿದ್ಧಿ ಗಳಿಸಿರುವ ನಯನತಾರಾ ಹುಟ್ಟಿದ್ದು ಕೇರಳದ ತಿರುವಲ್ಲದಲ್ಲಿ. ಚೊಚ್ಚಲ ಸಿನಿಮಾ ಮಲಯಾಳಂ ಆದರೂ ಅವರು ಹೆಚ್ಚು ಖ್ಯಾತಿ ಗಳಿಸಿದ್ದು ತಮಿಳು ಸಿನಿಮಾ ಕ್ಷೇತ್ರದಲ್ಲಿ.
ಮಲೈಕಾ ಅರೋರಾ
ಬಾಲಿವುಡ್ ಬೆಡಗಿ ಮಲೈಕಾ ಅರೋರಾಗೂ ಕೇರಳಕ್ಕೂ ಅಳಿಸಲಾಗದ ನಂಟಿದೆ. ಇವರ ತಾಯಿ ಮಲಯಾಳಿ, ತಂದೆ ಪಂಜಾಬಿ. ಈಗಲೂ ಅವರು ತಮ್ಮ ರಜಾದಿನಗಳಲ್ಲಿ ಕೇರಳಕ್ಕೆ ಭೇಟಿ ನೀಡುತ್ತಾರೆ.
ಜಾನ್ ಅಬ್ರಹಾಂ
ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಜಾನ್ ಅಬ್ರಹಾಂ ಕೂಡ ಹಾಫ್ ಮಲಯಾಳಿ. ಅವರ ತಂದೆ ಕೇರಳದವರು. ತಾಯಿ ಗುಜರಾತಿ ಮೂಲದವರು.
ನಿತ್ಯಾ ಮೆನನ್
ಇತ್ತೀಚಿಗೆ ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಗಮನಸೆಳೆಯುತ್ತಿರುವ ನಿತ್ಯಾ ಮೆನನ್ ಕೂಡ ಕೇರಳದ ಚೆಲುವೆ. ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ.
PublicNext
14/12/2020 12:51 pm