ಬೆಂಗಳೂರು: ಗೋವಾದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗಿ ಕತ್ತಿಗೆ ಪೆಟ್ಟು ಮಾಡಿಕೊಂಡ ನಟ ದಿಗಂತ್ ರನ್ನ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತರಲಾಗಿದೆ.
ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಬಂದ ದಿಗಂತ್, ಸ್ಟ್ರಚರ್ ಮೇಲೇನೆ ಮಲಗಿದ್ದಾರೆ. ಗೋವಾದಲ್ಲಿ ಪ್ರಥಮ ಚಿಕಿತ್ಸೆ ಮಾಡಿಕೊಂಡು ಬಂದಿರೋ ದಿಗಂತ್ ಎಚ್ಚರವಾಗಿಯೇ ಇದ್ದಾರೆ.
ಉಳಿದಂತೆ, ದಿಗಂತ್ ಮುಂದಿನ ಚಿಕಿತ್ಸೆ ಮಣಿಪಾಲ್ ಆಸ್ಪತ್ರೆಯಲ್ಲಿಯೇ ನಡೆಯಲಿದ್ದು, ಹೆಚ್ಚಿನ ಅಧಿಕೃತ ಮಾಹಿತಿಯನ್ನ ವೈದ್ಯರೇ ನೀಡಲಿದ್ದಾರೆ.
PublicNext
21/06/2022 05:05 pm